177ನೇ ದಿನದ ಬಲ್ಡೋಟ ಹಟಾವೋ ಧರಣಿ ಯಶಸ್ವಿ
ಕೊಪ್ಪಳ, 25 ಏಪ್ರಿಲ್ (ಹಿ.ಸ.) : ಆ್ಯಂಕರ್ : ನಗರಸಭೆ ಮುಂದೆ ನಡೆದಿರುವ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ, ಕೇಂದ್ರ ಪರಿಸರ ಇಲಾಖೆಯ ಶಿಫಾರಸ್ಸಿನಂತೆ ಹಿರೇಬಗನಾಳ, ಅಲ್ಲಾನಗರ ಹತ್ತಿರದ ವಿಷಾನಿಲ ಉಗುಳುವ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು. ಹೈಕೋರ್ಟ್ ಆದೇಶದಂತೆ 44.35 ಎಕರೆ ಬಸ
177ನೇ ದಿನದ ಬಲ್ಡೋಟ ಹಟಾವೋ ಧರಣಿ ಯಶಸ್ವಿ


ಕೊಪ್ಪಳ, 25 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನಗರಸಭೆ ಮುಂದೆ ನಡೆದಿರುವ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ, ಕೇಂದ್ರ ಪರಿಸರ ಇಲಾಖೆಯ ಶಿಫಾರಸ್ಸಿನಂತೆ ಹಿರೇಬಗನಾಳ, ಅಲ್ಲಾನಗರ ಹತ್ತಿರದ ವಿಷಾನಿಲ ಉಗುಳುವ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು. ಹೈಕೋರ್ಟ್ ಆದೇಶದಂತೆ 44.35 ಎಕರೆ ಬಸಾಪುರ ಕೆರೆಯನ್ನು ಬಲ್ಡೋಟ ಅತಿಕ್ರಮಣದಿಂದ ಮುಕ್ತಗೊಳಿಸಿ, ಜಾನುವಾರು ನೀರು ಕುಡಿಯಲು ಅನುವು ಮಾಡಬೇಕು. ಕೊಪ್ಪಳ ಹತ್ತಿರ 2011ರಿಂದ ಬಲ್ಡೋಟ- ಎಂ.ಎಸ್.ಪಿ.ಎಲ್ ಪೆಲ್ಲೆಟ್ ಘಟಕ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಕಾರ್ಯಾಚರಿಸುತ್ತಿದ್ದು 40% ಭಾಗ ಮಾಲಿನ್ಯ ಮಾಡಿದೆ. ತಕ್ಷಣ ಈ ಘಟಕ ಬಂದ್ ಮಾಡಬೇಕು. ತುಂಗಭದ್ರಾ ಜಲಾಶಯ ವಿಷಗೊಳಿಸುವ ಕಾರ್ಖಾನೆಗಳನ್ನು ಮುಚ್ಚಬೇಕು. ಎಐಐಎಂಎಸ್ ಸಂಸ್ಥೆಯಿಂದ ಬಾಧಿತ 22 ಹಳ್ಳಿಯ ಜನರ ಆರೋಗ್ಯ ಸರ್ವೆ ಮಾಡಬೇಕು. ಐಐಎಸ್ಸಿ ಸಂಸ್ಥೆಯಿಂದ ಬಾಧಿತ ಹಳ್ಳಿ ಮತ್ತು ತುಂಗಭದ್ರಾ ನೀರಿನ ಗುಣಮಟ್ಟದ ಸರ್ವೆ ಮಾಡಬೇಕು ಎಂದು 177 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಯಶಸ್ವಿಯಾಯಿತು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪುಟ್ಟರಾಜ ಪಾಟೀಲ್, ಶಂಭುಲಿಂಗಪ್ಪ ಹರಗೇರಿ, ರವಿ ಕಾಂತನವರ, ರಾಜಶೇಖರ ಏಳುಬಾವಿ, ಗಾಯಕ ಸದಾಶಿವ ಪಾಟೀಲ್, ಶರಣು ಶೆಟ್ಟರ್, ಮಹಾದೇವಪ್ಪ ಮಾವಿನಮಡು, ನಾಗರಾಜ ಕುಷ್ಟಗಿ, ವಿಜಯಮಹಾಂತೇಶ ಹಟ್ಟಿ, ರಾಮಲಿಂಗಯ್ಯ ಶಾಸ್ತ್ರಿ, ಭೀಮಪ್ಪ ಯಲಬುರ್ಗಿ, ಶಿವಪ್ಪ ಜಲ್ಲಿ, ಗಂಗಮ್ಮ ಕುರುಗೋಡು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande