ಯಶವಂತಪುರ–ಬಿಕಾನೆರ್ ಬೇಸಿಗೆ ವಿಶೇಷ ರೈಲು ಸೇವೆ ವಿಸ್ತರಣೆ
ಹುಬ್ಬಳ್ಳಿ, 24 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೇಸಿಗೆ ರಜೆಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಯಶವಂತಪುರ–ಬಿಕಾನೆರ್ ನಡುವೆ ಸಂಚರಿಸುತ್ತಿರುವ ಬೇಸಿಗೆ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಮೊದಲು ಏಪ್ರಿಲ್ 29, 202
ಯಶವಂತಪುರ–ಬಿಕಾನೆರ್ ಬೇಸಿಗೆ ವಿಶೇಷ ರೈಲು ಸೇವೆ ವಿಸ್ತರಣೆ


ಹುಬ್ಬಳ್ಳಿ, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೇಸಿಗೆ ರಜೆಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಯಶವಂತಪುರ–ಬಿಕಾನೆರ್ ನಡುವೆ ಸಂಚರಿಸುತ್ತಿರುವ ಬೇಸಿಗೆ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ.

ಈ ಮೊದಲು ಏಪ್ರಿಲ್ 29, 2026ರವರೆಗೆ ಮಾತ್ರ ಸಂಚರಿಸಬೇಕಿದ್ದ ರೈಲು ಸಂಖ್ಯೆ 06543 ಯಶವಂತಪುರ–ಬಿಕಾನೆರ್ ಸಾಪ್ತಾಹಿಕ ವಿಶೇಷ ರೈಲು ಸೇವೆಯನ್ನು ಇದೀಗ ಮೇ 06, 2026ರಿಂದ ಜೂನ್ 10, 2026ರವರೆಗೆ ಹೆಚ್ಚುವರಿಯಾಗಿ 6 ಟ್ರಿಪ್ಗಳವರೆಗೆ ವಿಸ್ತರಿಸಲಾಗಿದೆ.

ಅದೇ ರೀತಿ, ಹಿಂತಿರುಗುವ ದಿಕ್ಕಿನಲ್ಲಿ ಈ ಹಿಂದೆ ಮೇ 02, 2026ರವರೆಗೆ ಓಡಾಟಕ್ಕೆ ನಿಗದಿಪಡಿಸಲಾಗಿದ್ದ ರೈಲು ಸಂಖ್ಯೆ 06544 ಬಿಕಾನೆರ್–ಯಶವಂತಪುರ ವಿಶೇಷ ರೈಲು ಸೇವೆಯನ್ನೂ ಮೇ 09, 2026ರಿಂದ ಜೂನ್ 13, 2026ರವರೆಗೆ 6 ಹೆಚ್ಚುವರಿ ಟ್ರಿಪ್ಗಳಿಗೆ ವಿಸ್ತರಿಸಲಾಗಿದೆ.

ಈ ಕ್ರಮದಿಂದ ಕರ್ನಾಟಕ ಮತ್ತು ರಾಜಸ್ಥಾನ ನಡುವಿನ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯಲಿದ್ದು, ಬೇಸಿಗೆ ಅವಧಿಯಲ್ಲಿ ಟಿಕೆಟ್ಗಳ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ.

ಈ ಕುರಿತು ಮಾಹಿತಿ ನೀಡಿರುವ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ, ಪ್ರಯಾಣಿಕರು ಈ ವಿಸ್ತರಿತ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande