ಬೆಂಗಳೂರು ಕಂಟೋನ್ಮೆಂಟ್–ಮಾಲ್ಡಾ ಟೌನ್ ನಡುವೆ ವಿಶೇಷ ರೈಲು ಸಂಚಾರ
ಹುಬ್ಬಳ್ಳಿ, 24 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಮುಂದಾಗಿದೆ. ಏಪ್ರಿಲ್ 27, 2026ರಂದು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಪಶ್ಚಿಮ ಬಂಗಾಳದ ಮಾಲ
ಬೆಂಗಳೂರು ಕಂಟೋನ್ಮೆಂಟ್–ಮಾಲ್ಡಾ ಟೌನ್ ನಡುವೆ ವಿಶೇಷ ರೈಲು ಸಂಚಾರ


ಹುಬ್ಬಳ್ಳಿ, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಮುಂದಾಗಿದೆ. ಏಪ್ರಿಲ್ 27, 2026ರಂದು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಪಶ್ಚಿಮ ಬಂಗಾಳದ ಮಾಲ್ಡಾ ಪಟ್ಟಣದ ರೈಲು ನಿಲ್ದಾಣ ತನಕ ಏಕಮುಖ ವಿಶೇಷ ರೈಲು ಓಡಿಸಲಾಗುತ್ತದೆ.

ರೈಲು ಸಂಖ್ಯೆ 06247 ಬೆಂಗಳೂರು ಕಂಟೋನ್ಮೆಂಟ್–ಮಾಲ್ಡಾ ಟೌನ್ ವಿಶೇಷ ಎಕ್ಸ್ಪ್ರೆಸ್ ಏಪ್ರಿಲ್ 27ರ ಮಧ್ಯರಾತ್ರಿ 12:15ಕ್ಕೆ ಹೊರಡಲಿದ್ದು, ಮರುದಿನ ಸಂಜೆ 7:30ಕ್ಕೆ ಮಾಲ್ಡಾ ಟೌನ್ ತಲುಪಲಿದೆ.

ಮಾರ್ಗ ಮಧ್ಯೆ ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ಪೆಟ್ಟೈ, ಕಾಟ್ಪಾಡಿ, ರೇಣಿಗುಂಟಾ, ಗೂಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಕ್, ಬಾಲೇಶ್ವರ, ಖರಗ್ಪುರ, ದನ್ಕುನಿ, ಬರ್ಧಮಾನ್, ಬೋಲ್ಪುರ್ (ಶಾಂತಿನಿಕೇತನ) ಹಾಗೂ ರಾಂಪುರ್ ಹಟ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ರೈಲಿನ ಸಂಯೋಜನೆಯಲ್ಲಿ ಒಂದು ಎಸಿ 2-ಟೈರ್ ಹಾಗೂ ಎಸಿ 3-ಟೈರ್ ಸಂಯುಕ್ತ ಬೋಗಿ, ಎರಡು ಎಸಿ 3-ಟೈರ್ ಬೋಗಿಗಳು, ಒಂಬತ್ತು ಸ್ಲೀಪರ್ ಬೋಗಿಗಳು, ಎಂಟು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಲಗೇಜ್-ಬ್ರೇಕ್ ವ್ಯಾನ್ಗಳು ಸೇರಿ ಒಟ್ಟು 22 ಬೋಗಿಗಳು ಇರಲಿವೆ.

ಈ ಕುರಿತು ಮಾಹಿತಿ ನೀಡಿರುವ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ, ಪ್ರಯಾಣಿಕರು ಈ ವಿಶೇಷ ರೈಲಿನ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande