
ಯಲಬುರ್ಗಾ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಯಲಬುರ್ಗಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟು ಫಲಿತಾಂಶ ಶೇ.98.56 ಆಗಿದೆ. ತಾಲ್ಲೂಕಿನ 15 ವಸತಿ ನಿಲಯಗಳ ಪೈಕಿ 11 ವಸತಿ ನಿಲಯಗಳು ಶೇ.100 ಫಲಿತಾಂಶ ದಾಖಲಿಸಿರುವುದು ಗಮನಾರ್ಹವಾಗಿದೆ.
ಇಟಗಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯೊಬ್ಬಳು ಶೇ.96.48 ಅಂಕಗಳನ್ನು ಪಡೆದು ವೈಯಕ್ತಿಕವಾಗಿ ವಿಶಿಷ್ಟ ಸಾಧನೆ ತೋರಿದ್ದಾಳೆ. ವಿದ್ಯಾರ್ಥಿಗಳಲ್ಲಿ ಪ್ರೇರಣೆ ಮೂಡಿಸಲು ಜಾರಿಗೊಂಡ “ಸ್ಫೂರ್ತಿಯ ನಡೆ” ಕಾರ್ಯಕ್ರಮವು ಈ ಸಾಧನೆಗೆ ಮಹತ್ತರವಾಗಿ ಕಾರಣವಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್