ವರನಟ ಡಾ. ರಾಜಕುಮಾರ್ ಕನ್ನಡದ ಆಸ್ತಿ : ಜಿಲ್ಲಾಧಿಕಾರಿ ಲತಾಕುಮಾರಿ
ಹಾಸನ, 24 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕನ್ನಡ ಚಲನಚಿತ್ರರಂಗದ ಧ್ರುವತಾರೆ, ನಟ ಸಾರ್ವಭೌಮ, ವರನಟ ಎಂದೇ ಪ್ರಸಿದ್ಧರಾದ ಡಾ. ರಾಜಕುಮಾರ್ ಕನ್ನಡದ ಆಸ್ತಿಯಾಗಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ಕೆ. ಎಸ್ ಲತಾಕುಮಾರಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್
Dc laths kumari


ಹಾಸನ, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕನ್ನಡ ಚಲನಚಿತ್ರರಂಗದ ಧ್ರುವತಾರೆ, ನಟ ಸಾರ್ವಭೌಮ, ವರನಟ ಎಂದೇ ಪ್ರಸಿದ್ಧರಾದ ಡಾ. ರಾಜಕುಮಾರ್ ಕನ್ನಡದ ಆಸ್ತಿಯಾಗಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ಕೆ. ಎಸ್ ಲತಾಕುಮಾರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು (ಸ್ವಾಯತ್ತ) ಸಹಯೋಗದಲ್ಲಿ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಡಾ. ರಾಜಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಭಾಷೆ ಸಂಸ್ಕೃತಿ, ಕಲೆಗೆ ರಾಜ್ ಕುಮಾರ್ ಅವರ ಕೊಡುಗೆ ಅಪಾರವಾಗಿದೆ ಎಂದರು.

ರಾಜ್ ಕುಮಾರ್ ಅವರ ಭಾಷೆಯ ಬಳಕೆಯಲ್ಲಿ ಸ್ಪಷ್ಟತೆ, ನಿಖರತೆ, ಅಭಿವ್ಯಕ್ತಿ, ಭಾವನೆಗಳನ್ನು ಗಮನಿಸಿದ ಅವರ ಮೇರು ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರಿಲ್ಲದೆ ನಮ್ಮ ನಾಡಿನಲ್ಲಿ ಜನಿಸಿದ ಅವರು ನಮ್ಮೇಲ್ಲರ ಹೆಮ್ಮೆಯಾಗಿದೆ ಎಂದು ತಿಳಿಸಿದರು.

ಅವರ ನಟಿಸಿರುವ ಸಿನಿಮಾಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದು, ಅವರ ಸಿನಿಮಾಗಳನ್ನು ವೀಕ್ಷಿಸುವುದರಿಂದ ಅನೇಕ ಜನರು ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳಲು ಪ್ರೇರಣೆಯಾಗಿವೆ ಎಂದು ಹೇಳಿದರು.

ರಾಜಕುಮಾರ್ ಅವರು ನಟನೆಯಷ್ಟೇ ಅಲ್ಲದೆ, ಅವರು ಉತ್ತಮ ಗಾಯಕರಾಗಿದ್ದರು, ಕನ್ನಡಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸಿದ ಮಹಾನಟ ಡಾ. ರಾಜಕುಮಾರ್, ಅವರ ಒಂದು ಒಂದು ಚಲನಚಿತ್ರಗಳು ಜೀವನದ ಪಾಠವನ್ನು ತಿಳಿಸುತ್ತವೆ ಎಂದು ತಿಳಿಸಿದರು.

ಸರಳತೆ, ಸೌಜನ್ಯ ಮತ್ತು ಶಿಸ್ತಿನ ಮೂರ್ತ ರೂಪವಾಗಿದ್ದ ರಾಜಕುಮಾರ್ ಅವರ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ, ಮಹಾಕಲಾವಿದರಾಗುವುದು ಅವರ ಕಲೆಗಳ ಮೂಲಕ, ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಒಳಗಾಗುವ ಪಾತ್ರಗಳಲ್ಲಿ ಅಭಿನಯಿಸದೇ ಯುವಜನತೆ ಹಾಗೂ ಅಭಿಮಾನಿಗಳಿಗೆ ಮಾದರಿಯಾಗಿದ್ದರು ಎಂದರು.

ಜೀವನವನ್ನು ಹೇಗೆ ಹೋರಾಟವಾಗಿ ನಡೆಸಬೇಕು ಎಂಬುದನ್ನು ಅವರು ತಮ್ಮ ಚಲನಚಿತ್ರಗಳ ಮೂಲಕ ಅಭಿಮಾನಿಗಳ ಜೀವನಕ್ಕೆ ದಾರಿದೀಪ ಆಗಿದ್ದರು, ಡಾ.ರಾಜಕುಮಾರ್ ಅವರ ಸಿನಿಮಾಗಳು ವೀಕ್ಷಕರ ಮನ ಪರಿವರ್ತನೆ ಹೊಂದುವಂತಹ ಚಲನಚಿತ್ರಗಳನ್ನು ಅಭಿನಯಿಸುತ್ತಿದ್ದರು ಎಂದು ತಿಳಿಸಿದರು.

ರಾಜಕುಮಾರ್ ಅವರ ಜೀವನವು ಶಿಸ್ತು ಮತ್ತು ಮನುಷ್ಯತ್ವದ ಪಾಠವನ್ನು ನಮಗೆ ಕಲಿಸುತ್ತದೆ. ಅವರ ಆದರ್ಶಗಳನ್ನು ಪಾಲಿಸುವುದು ನಾವೆಲ್ಲರೂ ಅವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande