
ಕೋಲಾರ, ೨೪ ಏಪ್ರಿಲ್ (ಹಿ.ಸ) :
ಆ್ಯಂಕರ್ : ವರನಟ ಡಾ. ರಾಜಕುಮಾರ್ ರವರ ಹುಟ್ಟುಹಬ್ಬವನ್ನು ಕೋಲಾರ ಜಿಲ್ಲಾ ಜಯ ಕರ್ನಾಟಕ ಹಾಗೂ ಶ್ರೀ ಭುವನೇಶ್ವರಿ ಕನ್ನಡ ಸಂಘ ಕೋಲಾರ ವತಿಯಿಂದ. ಕೋಲಾರ ನಗರದ ಹೊಸ ಬಸ್ ನಿಲ್ದಾಣ ಹತ್ತಿರದ ಪಲ್ಲವಿ ಚಿತ್ರ ಮಂದಿರದ ಮುಂಭಾಗದ ಡಾ.ರಾಜ್ ಕುಮಾರ್ ಜೋಡಿ ರಸ್ತೆಯ ವ್ರತ್ತದಲ್ಲಿ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆಚರಿಸಲಾಯಿತು.
ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ಮಾತನಾಡಿ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ರವರ ಮಗನಾಗಿ ಮುತ್ತುರಾಜ್ ೨೪ ಏಪ್ರಿಲ್ ೧೯೨೯ ರಲ್ಲಿ -ಜನಸಿ ಪೌರಾಣಿಕ ನಾಟಕಗಳಲ್ಲಿ ಉತ್ತಮ ಅಭಿನಯ ಮಾಡುವ ಮೂಲಕ ಸಿನಿಮಾರಂಗವನ್ನು ಪ್ರವೇಶಿಸಿದ ಮುತ್ತುರಾಜ್.ಡಾ. ರಾಜ್ಕುಮಾರ್ ಎಂಬ ನಾಮದಿಂದ ಹೆಚ್ಚು ಜನಪ್ರಿಯವಾದ ಒಬ್ಬ ಭಾರತೀಯ ಶ್ರೇಷ್ಠ ನಟ ಮತ್ತು ಗಾಯಕರು. ಅವರನ್ನು ಅಭಿಮಾನಿಗಳು ನಟ ಸಾರ್ವಭೌಮ, ಗಾನಗಂಧರ್ವ, ರಸಿಕರರಾಜ, ಪದ್ಮಭೂಷಣ, ಇನ್ನು ಹಲವಾರು ಹೆಸರುಗಳಿಂದ ಜನ ಪ್ರಿಯವಾಗಿ ಕರೆಯುತ್ತಾರೆ. ಅವರು ನಟಿಸಿದ ಪಾತ್ರಗಳನ್ನು ನೋಡಿದ ರಾಜ್ಯದ ಅನೇಕ ಯುವಕರು ಇವರ ಆದರ್ಶಗಳನ್ನು ಪಾಲಿಸುತಿದ್ದಾರೆ.
ಡಾ. ರಾಜಕುಮಾರ್ ರವರು ಕರ್ನಾಟಕ ರತ್ನ. ಪದ್ಮಬೂಷಣ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಜೊತೆಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದುಕೊಡಿದ್ದಾರೆ. ಬಂಗಾರದ ಮನುಷ್ಯ ಚಿತ್ರದಲ್ಲಿ ಅವರ ಅದ್ಭುತವಾದ ನಟನೆ ಅವರು ಹಾಗೂ ಅವರು ಹಾಡಿರುವ ಚಲನಚಿತ್ರ ಗೀತೆಗಳು ಹಾಗೂ ಭಕ್ತಿ ಗೀತೆಗಳು ಎಂದಿಗೂ ಕನ್ನಡಿಗರು ಮರೆಯುವಂತಿಲ್ಲ. ಡಾ. ರಾಜಕುಮಾರ್ ಅವರು ಗೋಕಾಕ್ ಚಳುವಳಿ ಯಂತಹ ಅನೇಕ ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲುತ್ತಿದ್ದರು ಇವರ ಹುಟ್ಟುಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡಾ. ರಾಜಕುಮಾರ್ ಜೋಡಿ ರಸ್ತೆಯಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ ಅಣ್ಣಾವ್ರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಕೆ.ಎನ್. ಪ್ರಕಾಶ್.ಜಿಲ್ಲಾ ಸಂಚಾಲಕ ಕೆ. ಅಮರನಾಥ್ ಸ್ವಾಮಿ. ಹಾಗೂ ಕಾರ್ಮಿಕ ಘಟಕದ ಅಧ್ಯಕ್ಷ ಲೋಕನಾಥ್ ಸಿಂಗ್ ಜಿಲ್ಲಾ ಸಂಚಾಲಕ. ವಿ. ಜಗದೀಶ್. ಸಂಘಟನಾ ಕಾರ್ಯಧರ್ಶಿ ಸುಬ್ರಮಣಿ. ರವಿ ಕುಮಾರ್ ಕಲ್ಲೇಶಿ.ಕೀಲುಕೋಟೆ.ಪ್ರಕಾಶ್ ಮುದುವತ್ತಿ.ಕನ್ನಡ ಸೂರಿ
ನವೀನ್.ಮಂಜುನಾಥ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್