ಶರಣರು, ದಾಸರ ಪರಂಪರೆಯಿಂದ ರಾಜ್ಯದಲ್ಲಿ ಶಾಂತಿ : ಬೊಮ್ಮಾಯಿ
ಹಾವೇರಿ, 24 ಏಪ್ರಿಲ್ (ಹಿ.ಸ.) : ಆ್ಯಂಕರ್ : ಶರಣರು, ದಾಸರ ಪರಂಪರೆ ನಮ್ಮ ಕರ್ನಾಟಕದ ಸಂಸ್ಕಾರ, ಸಂಸ್ಕೃತಿಯನ್ನು ಬೇರೆ ರಾಜ್ಯಗಳಿಗಿಂತ ಎತ್ತರವಾಗಿ ತೆಗೆದುಕೊಂಡು ಹೋಗಿವೆ. ಆದ್ದರಿಂದ ಕರ್ನಾಟಕದಲ್ಲಿ ಶಾಂತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಹಾವೇರಿ ಜ
ಧರ್ಮ ಸಭೆ


ಹಾವೇರಿ, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಶರಣರು, ದಾಸರ ಪರಂಪರೆ ನಮ್ಮ ಕರ್ನಾಟಕದ ಸಂಸ್ಕಾರ, ಸಂಸ್ಕೃತಿಯನ್ನು ಬೇರೆ ರಾಜ್ಯಗಳಿಗಿಂತ ಎತ್ತರವಾಗಿ ತೆಗೆದುಕೊಂಡು ಹೋಗಿವೆ. ಆದ್ದರಿಂದ ಕರ್ನಾಟಕದಲ್ಲಿ ಶಾಂತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೋತನಹಳ್ಳಿ ಗ್ರಾಮದ ಸಿಂಧಗಿ ಶ್ರೀ ಶಾಂತವೀರೇಶ್ವರ ಮಠದ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಸವಣ್ಣ ಎಲ್ಲರಿಗೂ ಅನುಕೂಲ ಆಗುವ ಮಹಾನ್ ವ್ಯಕ್ತಿತ್ವ, ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬಸವಣ್ಣ, ಅದಕ್ಕೆ ಅವರನು ವಿಶ್ವಗುರು ಅಂತ ಕರೆಯುತ್ತೇವೆ. ವೇದ ಪುರಾಣಗಳಲ್ಲಿ ಎಲ್ಲವೂ ಇದೆ. ಆದರೆ, ಸಾಮಾನ್ಯ ವಚನಗಳ ಮೂಲಕ ಬದುಕಿನ ಮಾರ್ಗ ತೋರಿಸುವ ಕೆಲಸವನ್ನು ಬಸವಣ್ಣ ಮಾಡಿದರು. ದೊಡ್ಡ ವಿಚಾರಗಳು ಜನ ಸಾಮಾನ್ಯರಿಗೆ ಮುಟ್ಟದಿದ್ದರೆ ಅದು ಓದುವವರಿಗೆ ಮಾತ್ರ ಅನುಕೂಲವಾಗುತ್ತದೆ. ಬಸವಾದಿ ಶರಣರ ಎಲ್ಲ ವಚನಗಳು ನಮಗೆ ಸಿಕ್ಕಿಲ್ಲ. ಈಗ ಸುಮಾರು 22 ಸಾವಿರ ವಚನಗಳು ಸಿಕ್ಕಿವೆ. ಬಸವಾದಿ ಶರಣರಲ್ಲಿ ಅಲ್ಲಮಪ್ರಭು ಅತ್ಯಂತ ವಿಶಿಷ್ಟ ಶರಣರು, ಅವರು ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಅಕ್ಕಮಹಾದೇವಿ ಉತ್ತರ ಭಾರತದ ಕೃಷ್ಣನ ಮೀರಾಳಿಗೆ ಸಮಾನವಾದವರು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಹಲವಾರು ಶ್ರೀಗಳು ಹಾಗೂ ರಾಜಕೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande