ಎಸ್ಸೆಸ್ಸೆಲ್ಸಿಯಲ್ಲಿ ಕೊಪ್ಪಳ ಜಿಲ್ಲೆಗೆ ಶೇ. 93 ರಷ್ಟು ಫಲಿತಾಂಶ
ಕೊಪ್ಪಳ, 24 ಏಪ್ರಿಲ್ (ಹಿ.ಸ.) : ಆ್ಯಂಕರ್ : 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಏಪ್ರಿಲ್ 23ರಂದು ಪ್ರಕಟಗೊಂಡಿದ್ದು, ಕೊಪ್ಪಳ ಜಿಲ್ಲೆಗೆ ಶೇ. 93 ರಷ್ಟು ಫಲಿತಾಂಶ ಬಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರಗೌಡ ಪಾಟೀಲ ಅವರು ತಿಳಿಸಿದ
ಎಸ್ಸೆಸ್ಸೆಲ್ಸಿಯಲ್ಲಿ ಕೊಪ್ಪಳ ಜಿಲ್ಲೆಗೆ ಶೇ. 93 ರಷ್ಟು ಫಲಿತಾಂಶ


ಕೊಪ್ಪಳ, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಏಪ್ರಿಲ್ 23ರಂದು ಪ್ರಕಟಗೊಂಡಿದ್ದು, ಕೊಪ್ಪಳ ಜಿಲ್ಲೆಗೆ ಶೇ. 93 ರಷ್ಟು ಫಲಿತಾಂಶ ಬಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರಗೌಡ ಪಾಟೀಲ ಅವರು ತಿಳಿಸಿದ್ದಾರೆ.

2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಒಟ್ಟು 21,433 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 19,802 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಜ್ಯ ಮಟ್ಟದ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆ ಈ ಬಾರಿ 25ನೇ ಸ್ಥಾನವನ್ನು ಪಡೆದುಕೊಂಡಿದ್ದು, ಕಳೆದ ವರ್ಷ (2024-25) ಪಡೆದಿದ್ದ 30ನೇ ಸ್ಥಾನದಿಂದ 5 ಸ್ಥಾನಗಳ ಜಿಗಿತ ಸಾಧಿಸಿದೆ.

ತಾಲ್ಲೂಕು ವಾರು ಫಲಿತಾಂಶ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಶೇ. 95.14 ರಷ್ಟು ಫಲಿತಾಂಶದೊ0ದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ. ಇತರೆ ತಾಲೂಕುಗಳಾದ ಗಂಗಾವತಿ, ಕುಷ್ಟಗಿ ಮತ್ತು ಕೊಪ್ಪಳ ತಾಲ್ಲೂಕುಗಳಲ್ಲಿ ಕ್ರಮವಾಗಿ 92.88%, 92.45% & 89.53% ಫಲಿತಾಂಶ ದಾಖಲಾಗಿದೆ.

96 ಶಾಲೆಗಳಲ್ಲಿ ಪ್ರತಿಶತ 100ರಷ್ಟು ಫಲಿತಾಂಶ : ಜಿಲ್ಲೆಯ ಒಟ್ಟು 96 ಪ್ರೌಢಶಾಲೆಗಳು 100% ಫಲಿತಾಂಶ ಸಾಧಿಸಿದ್ದು, ಯಲಬುರ್ಗಾ ತಾಲೂಕಿನ 35, ಗಂಗಾವತಿಯ 16, ಕುಷ್ಟಗಿಯ 16 ಮತ್ತು ಕೊಪ್ಪಳ ತಾಲ್ಲೂಕಿನ 29 ಶಾಲೆಗಳಲ್ಲಿ ಶೇ. 100ರಷ್ಟು ಫಲಿತಾಂಶ ದಾಖಲೆಯಾಗಿದೆ. ಇದರಲ್ಲಿ ಜಿಲ್ಲೆಯ 34 ಸರ್ಕಾರಿ ಪ್ರೌಢಶಾಲೆಗಳು, 05 ಅನುದಾನಿತ ಪ್ರೌಢಶಾಲೆಗಳು, 39 ಅನುದಾನ ರಹಿತ ಪ್ರೌಢಶಾಲೆಗಳು ಮತ್ತು 18 ವಸತಿ ಶಾಲೆಗಳು ಒಳಗೊಂಡಿರುತ್ತದೆ.

ಜಿಲ್ಲೆಯ ಟಾಪರ್ಗಳ ಪಟ್ಟಿ : ಕುಕನೂರಿನ ಎಸ್ಎಫ್ಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಷ ಅವರು 625ಕ್ಕೆ 622 ಅಂಕಗಳನ್ನು (99.52%) ಪಡೆಯುವ ಮೂಲಕ ಕೊಪ್ಪಳ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಅದೇ ರೀತಿ ಕನಕಗಿರಿಯ ಎಂ.ಡಿ.ಆರ್.ಎಸ್ ವಿದ್ಯಾರ್ಥಿ ನಾಗರಾಜ ಮತ್ತು ತಳಕಲ್ ಬಾಲಕಿಯರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ವೇತ ಅವರು 625ಕ್ಕೆ ತಲಾ 621 (99.36%) ಅಂಕಗಳೊಂದೊಗೆ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ಹೊಸಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಶುಭಪ್ರಿಯ ಮತ್ತು ಕಾಟಾಪುರದ ಎಂ.ಡಿ.ಆರ್.ಎಸ್ ವಿದ್ಯಾರ್ಥಿ ಅಭಿ ಹನಕುಂಟಿ ಅವರು 625ಕ್ಕೆ ತಲಾ 620 ಅಂಕಗಳನ್ನು (99.20%) ಪಡೆಯುವ ಮೂಲಕ ಕೊಪ್ಪಳ ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಫಲಿತಾಂಶ ಹೆಚ್ಚಳಕ್ಕೆ ಜಿಲ್ಲಾ ಹಂತದಲ್ಲಿ ಕೈಗೊಂಡ ಕ್ರಮಗಳು : ಕೊಪ್ಪಳ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳ್ಳಕ್ಕಾಗಿ ಜಿಲ್ಲಾ ಹಂತದಲ್ಲಿ ಮಿಷನ್-40% ಅನುಷ್ಠಾನ, ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರ ಮಾರ್ಗದರ್ಶನದಲ್ಲಿ ಸ್ಪೂರ್ಥಿ ನಡೆ ಕಾರ್ಯಕ್ರಮ ಹಾಗೂ ದಿನಕ್ಕೊಂದು ಪ್ರಶ್ನೆ-ವಾರಕ್ಕೊಂದು ಪರಿಕ್ಷೆ, ಬೋರ್ಡ ನಿಂದ ನಡೆಸಲಾದ ಪೂರ್ವ ಸಿದ್ಧತಾ ಪರಿಕ್ಷೆಗಳ ಸಮರ್ಪಕ ಅನುಷ್ಠಾನ, ಆರು ಮಾದರಿ ಪ್ರಶ್ನೆ ಪತ್ರಿಕೆಗಳ-ಅಭ್ಯಾಸ, ಎಲ್.ಬಿ.ಎ ಸಂಪನ್ಮೂಲ ಸದ್ಬಳಕೆ, ಅನುಭವಿ ವಿಷಯ ಸಂಪನ್ಮೂಲ ಶಿಕ್ಷಕರಿಂದ ನೀಲನಕ್ಷೆ ಆಧಾರಿತ ಸಮಗ್ರ ವಿಷಯವಾರು ಸ್ಕೋರಿಂಗ, ಪ್ಯಾಕೇಜ್-ತಯಾರಿಕೆ, ವಿತರಣೆ ಮತ್ತು ಅನುಷ್ಠಾನ, ಜಿಲ್ಲಾ ಹಂತದ ಅಧಿಕಾರಿಗಳಿಂದ ಶಾಲೆಗಳ ದತ್ತು ಸ್ವೀಕಾರ ಹಾಗೂ ಮಾರ್ಗ ದರ್ಶನ, ತಾಯಂದಿರ ಸಭೆ, ಪೋಷಕರ ಸಭೆ, ಎಸ್.ಡಿ.ಎಂ.ಸಿ ಸಹ ಭಾಗಿತ್ವ ಮತ್ತು ಶಾಲಾ ಹಂತದಲ್ಲಿ ಗುಂಪು ಅಧ್ಯಯನ, ವಿಶೇಷ ತರಗತಿಗಳು ವಿದ್ಯಾರ್ಥಿಗಳ ವರ್ಗೀಕರಣ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರಗೌಡ ಪಾಟೀಲ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande