ಗಂಗಾವತಿ : ವಸತಿ ನಿಲಯಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ 96.69% ; ನಾಲ್ಕು ನಿಲಯಗಳಲ್ಲಿ ಶೇ.100 ಸಾಧನೆ
ಗಂಗಾವತಿ, 24 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗಂಗಾವತಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು ಫಲಿತಾಂಶ ಶೇ. 96.69 ಆಗಿದೆ. ತಾಲ್ಲೂಕಿನ 8 ವಸತಿ ನಿಲಯಗಳ ಪೈಕಿ 4 ವಸತಿ ನಿಲಯಗಳು
ಗಂಗಾವತಿ : ವಸತಿ ನಿಲಯಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ 96.69% ; ನಾಲ್ಕು ನಿಲಯಗಳಲ್ಲಿ ಶೇ.100 ಸಾಧನೆ


ಗಂಗಾವತಿ, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗಂಗಾವತಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು ಫಲಿತಾಂಶ ಶೇ. 96.69 ಆಗಿದೆ. ತಾಲ್ಲೂಕಿನ 8 ವಸತಿ ನಿಲಯಗಳ ಪೈಕಿ 4 ವಸತಿ ನಿಲಯಗಳು ಶೇ.100 ಫಲಿತಾಂಶ ದಾಖಲಿಸಿರುವುದು ವಿಶೇಷವಾಗಿದೆ.

ಕನಕಗಿರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯೊಬ್ಬಳು ಶೇ. 95.68 ಅಂಕಗಳನ್ನು ಗಳಿಸಿ ವೈಯಕ್ತಿಕವಾಗಿ ಉತ್ತಮ ಸಾಧನೆ ತೋರಿದ್ದಾಳೆ. ಈ ಸಾಧನೆಗೆ “ಸ್ಫೂರ್ತಿಯ ನಡೆ” ಕಾರ್ಯಕ್ರಮವು ಪ್ರಮುಖ ಕಾರಣವಾಗಿದ್ದು, ವಿದ್ಯಾರ್ಥಿಗಳಲ್ಲಿ ಪ್ರೇರಣೆ ಮೂಡಿಸಿ ವಿದ್ಯಾಭ್ಯಾಸದತ್ತ ಒಲವು ಹೆಚ್ಚಿಸಲು ಸಹಾಯವಾಗಿದೆ.

ಈ ಉತ್ತಮ ಫಲಿತಾಂಶಕ್ಕೆ ಸ್ಪೂರ್ತಿಯಾಗಿ ಕಾರ್ಯನಿರ್ವಹಿಸಿದ ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande