ಸಾಂಸ್ಕೃತಿಕ ಕಲಾ ತಂಡ-ಕಲಾವಿದರ ಆಯ್ಕೆ ; ಅರ್ಜಿ ಆಹ್ವಾನ
ಕನಕಗಿರಿ, 24 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕನಕಗಿರಿ ಉತ್ಸವ-2026ರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾ ತಂಡ-ಕಲಾವಿದರ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕನಕಗಿರಿ ಉತ್ಸವವನ್ನು ಮೇ 16 ಮತ್ತು 17 ರಂದು ಜಿಲ್ಲಾಡಳಿತದ ವತಿಯಿಂದ ಅತ್ಯಂತ ವಿಜೃಂಭಣೆಯಿ0ದ ಹಾಗೂ ವಿಶಿಷ್ಟವಾಗಿ ಆಚರಿಸಲು ತೀರ್ಮ
Cultural Art Team - Selection of Artists - Call for Applications


ಕನಕಗಿರಿ, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕನಕಗಿರಿ ಉತ್ಸವ-2026ರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾ ತಂಡ-ಕಲಾವಿದರ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕನಕಗಿರಿ ಉತ್ಸವವನ್ನು ಮೇ 16 ಮತ್ತು 17 ರಂದು ಜಿಲ್ಲಾಡಳಿತದ ವತಿಯಿಂದ ಅತ್ಯಂತ ವಿಜೃಂಭಣೆಯಿ0ದ ಹಾಗೂ ವಿಶಿಷ್ಟವಾಗಿ ಆಚರಿಸಲು ತೀರ್ಮಾನಿಸಲಾಗಿರುತ್ತದೆ.

ಈ ಹಿನ್ನಲೆಯಲ್ಲಿ ಕನಕಗಿರಿ ಉತ್ಸವ ಕಾರ್ಯಕ್ರಮಕ್ಕೆ ಅತ್ಯುತ್ತಮ, ಆಕರ್ಷಕ ವೇಷ-ಭೂಷಣ ಹಾಗೂ ವಾದ್ಯಪರಿಕರಗಳನ್ನು ಒಳಗೊಂಡಿರುವ ಜಿಲ್ಲೆಯ ಸ್ಥಳೀಯ ಕಲಾವಿದರು ಹಾಗೂ ಹೊರ ಜಿಲ್ಲೆಯ ಕಲಾವಿದರು ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮಕ್ಕೆ ಮತ್ತು ಮೆರವಣಿಗೆ (ಜನಪದ ಪ್ರದರ್ಶಕ) ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸ್ವೀಕಾರಗೊಂಡ ಅರ್ಜಿಗಳನ್ನು ಉತ್ಸವದ ಸಾಂಸ್ಕೃತಿಕ ಹಾಗೂ ಮೆರವಣಿಗೆ ಸಮಿತಿಗಳಿಂದ ಪರಿಶೀಲನೆಗೋಳಪಡಿಸಿದ ನಂತರ ಉತ್ತಮ ಕಲಾ ತಂಡಗಳನ್ನು ಮತ್ತು ಕಲಾವಿದರನ್ನು ಆಯ್ಕೆ ಮಾಡಲಾಗುವ ನಿಬಂಧನೆಗೆ ಸಮಿತಿಯು ಒಳಪಟ್ಟಿರುತ್ತದೆ ಎಂಬುದನ್ನು ಕಲಾವಿದರ ಮತ್ತು ಕಲಾತಂಡಗಳ ಆದ್ಯಮಾಹಿತಿಗಾಗಿ ಈ ಮೂಲಕ ತಿಳಿಸಲಾಗಿದೆ.

ಅರ್ಜಿಯನ್ನು ಸದಸ್ಯ ಕಾರ್ಯದರ್ಶಿಗಳು, ಸಾಂಸ್ಕೃತಿಕ ಸಮಿತಿ ಹಾಗೂ ಮೆರವಣಿಗೆ ಸಮಿತಿ ಕನಕಗಿರಿ ಉತ್ಸವ-2026 ಹಾಗೂ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನದ 1ನೇ ಮಹಡಿ ಕೊಪ್ಪಳ-583231 ರವರಿಗೆ ಮೇ 2ರ ಸಂಜೆ 4 ಗಂಟೆಯೊಳಗಡೆ ಆಸಕ್ತ ಕಲಾವಿದರು, ಕಲಾತಂಡಗಳು ತಮ್ಮ ಸ್ವವಿವರದೊಂದಿಗೆ ಛಾಯಾಚಿತ್ರ ಮತ್ತು ದಾಖಲೆಗಳ ಸಮೇತ ಅರ್ಜಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande