ಸಿಂಗೆಹಳ್ಳಿ ಸಮೀಪ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ
ಸಿಂಗೆಹಳ್ಳಿ ಸಮೀಪ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ
ಕೋಲಾರ ತಾಲ್ಲೂಕಿನ ಸಿಂಗೆಹಳ್ಳಿ ಸಮೀಪ ಗುಟ್ಟದಲ್ಲಿ ಚಿರತೆ ಪ್ರತ್ಯಕ್ಷ


ಕೋಲಾರ, ೨೪ ಏಪ್ರಿಲ್ (ಹಿ.ಸ) :

ಆ್ಯಂಕರ್ : ತಾಲ್ಲೂಕಿನ ಸಿಂಗೆಹಳ್ಳಿ ಸಮೀಪದ ಗುಟ್ಟಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಕುರಿಗಾಹಿಗಳು, ಜನತೆ ಆತಂಕದಿ0ದ ಈ ಭಾಗದಲ್ಲಿ ಓಡಾಡುವಂತಾಗಿದ್ದು, ಯಾವುದೇ ಅನಾಹುತವಾಗುವ ಮುನ್ನಾ ಚಿರತೆ ಹಿಡಿಯಲು ಕ್ರಮವಹಿಸಲು ಅರಣ್ಯ ಇಲಾಖೆಗೆ ಗ್ರಾಮದ ಮುಖಂಡ ತಿರುಮಲೇಶ್ ಮತ್ತಿತರ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಈ ಸಂಬ0ಧ ಪತ್ರಿಕಾ ಹೇಳಿಕೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವ ತಿರುಮಲೇಶ್, ಮೊದಲು ಚಿರತೆ ಇದೆ ಎಂಬ ವದಂತಿಗಳು ಹರಡಿತ್ತು ಆದರೆ ಸಂಜೆ ವೇಳೆಗೆ ಪಟಾಕಿ ಸಿಡಿಸಿದ್ದರಿಂದಾಗಿ ಚಿರತೆ ಹೊರ ಬಂದು ಗುಟ್ಟದ ಮೇಲೆ ಪ್ರತ್ಯಕ್ಷವಾಯಿತು. ಚಿರತೆ ಆಹಾರಕ್ಕಾಗಿ ಗ್ರಾಮಕ್ಕೆ ನುಗ್ಗಿ ಕುರಿ,ರಾಸುಗಳ ಮೇಲೆ ಧಾಳಿ ಮಾಡುವ ಆತಂಕ ಇರುವುದರಿಂದ ಜಿಲ್ಲಾಡಳಿತ ಬೋನು ಇಟ್ಟಾದರೂ ಚಿರತೆ ಸೆರೆ ಹಿಡಿಯುವ ಮೂಲಕ ಈ ಭಾಗದ ಜನರಲ್ಲಿ ಕಾಡುತ್ತಿರುವ ಆತಂಕ ದೂರ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande