






ಬಳ್ಳಾರಿ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : 2025-26ರ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಳ್ಳಾರಿ ತಾಲ್ಲೂಕಿನ ಬೈರದೇವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಲವು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಶಾಲೆಯ ಒಟ್ಟು ಏಳು ವಿದ್ಯಾರ್ಥಿಗಳು ಶೇ. 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ.
ರಾಂಬಹದ್ದೂರ್ ರೆಡ್ಡಿ.ಬಿ-612 ಅಂಕ(ಶೇ.97.92)
ಕೆ.ಎಸ್. ಸಿಂಚನ-612 ಅಂಕ(ಶೇ.97.92)
ಜಿ. ಸಂಜಯ್-606 ಅಂಕ(ಶೇ.96.96)
ಕೆ. ಶಿವಕುಮಾರ್-604 ಅಂಕ(ಶೇ.96.64)
ಜಿ.ಕೆ. ಅಂಕಿತ-601 ಅಂಕ(ಶೇ.96.16)
ಗಂಗಾಧರ ಗೌಡ.ಎಂ-600 ಅಂಕ(ಶೇ.96)
ಪಿ. ಅಮೃತ-599 ಅಂಕ(ಶೇ.95.84)
ಕನ್ನಡ ವಿಷಯದಲ್ಲಿ 04 ವಿದ್ಯಾರ್ಥಿಗಳು, ಹಿಂದಿ ವಿಷಯದಲ್ಲಿ 01 ವಿದ್ಯಾರ್ಥಿ, ಗಣಿತದಲ್ಲಿ 01 ವಿದ್ಯಾರ್ಥಿ, ವಿಜ್ಞಾನ ವಿಷಯದಲ್ಲಿ 01 ವಿದ್ಯಾರ್ಥಿ ಸೇರಿದಂತೆ ಒಟ್ಟು 07 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಇತಿಹಾಸ ಬರೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್