ಎಸ್.ಎಸ್.ಎಲ್.ಸಿ ; ಸರಕಾರಿ ಬಾಲಮಂದಿರದ ವಿದ್ಯಾರ್ಥಿಗಳ ಸಾಧನೆ
ಕೊಪ್ಪಳ, 24 ಏಪ್ರಿಲ್ (ಹಿ.ಸ.) : ಆ್ಯಂಕರ್ : 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಏಪ್ರಿಲ್ 23ರಂದು ಪ್ರಕಟಗೊಂಡಿದ್ದು, ಕೊಪ್ಪಳದ ಸರಕಾರಿ ಬಾಲಕರ ಬಾಲಮಂದಿರದ ನಿವಾಸಿ ಮಕ್ಕಳು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧ
ಎಸ್.ಎಸ್.ಎಲ್.ಸಿ ; ಸರಕಾರಿ ಬಾಲಮಂದಿರದ ವಿದ್ಯಾರ್ಥಿಗಳ ಸಾಧನೆ


ಕೊಪ್ಪಳ, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಏಪ್ರಿಲ್ 23ರಂದು ಪ್ರಕಟಗೊಂಡಿದ್ದು, ಕೊಪ್ಪಳದ ಸರಕಾರಿ ಬಾಲಕರ ಬಾಲಮಂದಿರದ ನಿವಾಸಿ ಮಕ್ಕಳು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಅವರು ತಿಳಿಸಿದ್ದಾರೆ.

ಸರಕಾರಿ ಬಾಲಕರ ಬಾಲಮಂದಿರದ ವಿದ್ಯಾರ್ಥಿ ಶ್ರೀನಿವಾಸ ಕನ್ನಡ ವಿಷಯದಲ್ಲಿ 105 ಅಂಕಗಳು, ಇಂಗ್ಲಿಷ್ನಲ್ಲಿ 55, ಆಟೋವೆ ಮೊಬೈಲ್ 89 ಅಂಕಗಳು, ಗಣಿತದಲ್ಲಿ 67, ವಿಜ್ಞಾನದಲ್ಲಿ 78 ಮತ್ತು ಸಮಾಜ ವಿಷಯದಲ್ಲಿ 64 ಅಂಕಗಳು ಸೇರಿ ಒಟ್ಟು 458 ಅಂಕಗಳನ್ನು ಪಡೆದು ಶೇಕಡಾ 70.46 ಫಲಿತಾಂಶವನ್ನು ಪಡೆದಿದ್ದಾನೆ. ಹಾಗೆಯೇ ಇನ್ನೋರ್ವ ವಿದ್ಯಾರ್ಥಿ ಗೌತಮರಾಜ ಕನ್ನಡದಲ್ಲಿ 93, ಇಂಗ್ಲಿಷ್ 46, ಆಟೋವೆ ಮೊಬೈಲ್ 83, ಗಣಿತ 53, ವಿಜ್ಞಾನ 68 ಹಾಗೂ ಸಮಾಜ 67 ಅಂಕಗಳು ಸೇರಿ ಒಟ್ಟು 410 ಅಂಕಗಳನ್ನು ಪಡೆದು ಶೇಕಡಾ 63.08 ಫಲಿತಾಂಶವನ್ನು ಪಡೆದಿರುತ್ತಾನೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande