
ಬೆಂಗಳೂರು, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಶ್ವ ಪುಸ್ತಕ ದಿನ ಅಂಗವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರೇರಣಾದಾಯಕ ಸಂದೇಶ ಹಂಚಿಕೊಂಡಿದ್ದಾರೆ.
ಪುಸ್ತಕಗಳು ನಮ್ಮ ಆಲೋಚನೆಗಳನ್ನು ರೂಪಿಸುವ, ತಿಳುವಳಿಕೆಯನ್ನು ಆಳಗೊಳಿಸುವ ಮತ್ತು ಜೀವನದಲ್ಲಿ ಜ್ಞಾನಪೂರ್ಣ ದಾರಿಯನ್ನು ತೋರಿಸುವ ಶಕ್ತಿಯಾಗಿದೆ ಎಂದು ಅವರು ಹೇಳಿದ್ದಾರೆ. ಯುವಪೀಳಿಗೆಗೆ ಕರೆ ನೀಡಿರುವ ಅವರು, ಓದಿಗೆ ಸಮಯ ಮೀಸಲಿಡಿ, ಪ್ರಶ್ನೆಗಳನ್ನು ಕೇಳಿ ಮತ್ತು ನಿರಂತರವಾಗಿ ಕಲಿಯುತ್ತಿರಲಿ ಎಂದು ಮನವಿ ಮಾಡಿದ್ದಾರೆ.
ಪುಸ್ತಕಗಳಿಂದ ದೊರೆಯುವ ಜ್ಞಾನವು ಆತ್ಮವಿಶ್ವಾಸವನ್ನು ಬೆಳೆಸುವುದರ ಜೊತೆಗೆ, ಸಹಾನುಭೂತಿಯನ್ನು ವೃದ್ಧಿಸಿ ಮನಸ್ಸನ್ನು ವಿಶಾಲಗೊಳಿಸುತ್ತದೆ ಎಂದು ತಿಳಿಸಿದ್ದಾರೆ. ಓದುವ ಅಭ್ಯಾಸ ಹೊಂದಿದ ಪೀಳಿಗೆ ಚಿಂತನೆಯುಳ್ಳ ನಾಗರಿಕರಾಗಿ ಬೆಳೆಯುತ್ತಿದ್ದು, ಪ್ರಗತಿಪರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa