ಆಂಬ್ಯುಲೆನ್ಸ್ನಲ್ಲಿ ಆಗಮಿಸಿ ಪರೀಕ್ಷೆ ಬರೆದ ಕುಸುಮ, ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ
ಆಂಬ್ಯುಲೆನ್ಸ್ನಲ್ಲಿ ಆಗಮಿಸಿ ಪರೀಕ್ಷೆ ಬರೆದ ಕುಸುಮ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ
ಆಂಬುಲೆನ್ಸ್ ಮೂಲಕ ಆಗಮಿಸಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.


ಕೋಲಾರ, ೨೩ ಏಪ್ರಿಲ್ (ಹಿ.ಸ) :

ಆ್ಯಂಕರ್ : ಆಂಬುಲೆನ್ಸ್ ಮೂಲಕ ಬಂದು ಸ್ಟçಚರ್ನಲ್ಲಿಯೆ ಮಲಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ.

ಅಪಘಾತವಾಗಿ ಗಾಯಗೊಂಡ ವಿದ್ಯಾರ್ಥಿನಿ ಛಲ ಬಿಡದೆ ಸ್ಟçಚರ್ನಲ್ಲಿ ಬಂದು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಳು. ಶಿಕ್ಷಣ ಇಲಾಖೆ ಹಾಗು ತಾಯಿಯ ನೆರವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಂಬುಲೆನ್ಸ್ನಲ್ಲಿ ಬಂದು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಫಸ್ಟ್ ಕ್ಲಾಸ್ನಲ್ಲಿ ಪಾಸ್ ಆಗಿದ್ದಾಳೆ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಿನ್ನನಾಗಹಳ್ಳಿಯ ನಿವಾಸಿಯಾಗಿರುವ ಕುಸುಮಾ ಸದ್ಯ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಇರುವ ಹಾಸ್ಟರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆಗೆ ಒಳಗಾಗಿದ್ದು, ಕುಸುಮಾ ೬೨೫ ಕ್ಕೆ ೩೭೪ ಅಂಕ ಪಡೆದು ಮಾದರಿಯಾಗಿದ್ದಾಳೆ. ಕನ್ನಡದಲ್ಲಿ ೬೨, ಇಂಗ್ಲೀಷ್ನಲ್ಲಿ ೭೨, ಹಿಂದಿ-೬೩, ಗಣಿತ-೬೭, ವಿಜ್ಞಾನ-೫೪, ಸಮಾಜ-೫೬ ಅಂಕ ಪಡೆದಿದ್ದಾಳೆ.

ಕುಸುಮಾಗೆ ಕೋಲಾರದ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸೇರಿ ಸಾಕಷ್ಟು ಜನರು ನೆರವಾಗಿದ್ದರು. ಅಲ್ಲದೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ಮನೆಗೆ ಭೇಟಿ ನೀಡಿ ನೆರವಾಗಿ ಧೈರ್ಯ ತುಂಬಿದ್ದರು. ಸದ್ಯ ಆಸ್ಪತ್ರೆಯ್ಲೂ ಚಿಕಿತ್ಸೆಗೆ ಸಹಕರಿಸಿರುವ ಮಾಜಿ ಸಚಿವ ಸುರೇಶ್ ಕುಮಾರ್, ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande