ಎಸ್ಸೆಸ್ಸೆಲ್ಸಿ ಪಾಸಾದ ಖುಷಿಯಲ್ಲಿ ಈಜಲು ಹೋದ ವಿದ್ಯಾರ್ಥಿ ಸಾವು
ಎಸ್ಸೆಸ್ಸೆಲ್ಸಿ ಪಾಸಾದ ಖುಷಿಯಲ್ಲಿ ಈಜಲು ಹೋದ ವಿದ್ಯಾರ್ಥಿ ಸಾವು
ಎಸ್ಸೆಸ್ಸೆಲ್ಸಿ ಪಾಸಾದ ಖುಷಿಯಲ್ಲಿ ಈಜಲು ಹೋದ ವಿದ್ಯಾರ್ಥಿ ಸಾವು


ಕೋಲಾರ, ೨೩ ಏಪ್ರಿಲ್ (ಹಿ.ಸ) :

ಆ್ಯಂಕರ್ : ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ತಕ್ಷಣ ಪಾಸಾದ ಖುಷಿಯಲ್ಲಿ ಈಜಲು ಹೋದ ಬಾಲಕನೊಬ್ಬ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಸೊಣ್ಣವಾಡಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾದ ಗ್ರಾಮದ ಕಿರಣ್ ತನ್ನ ಸ್ನೇಹಿತರ ಜೊತೆ ಈಜಲು ಹೋಗಿ ಆಳದ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮೃತನಿಗೆ ಈಜು ಸಹ ಬರುತ್ತಿರಲಿಲ್ಲ, ಆದರೆ ಆತ ನೇರವಾಗಿ ಬಾವಿಗೆ ಹಾರಿದ ಪರಿಣಾಮ ಮೃತಪಟ್ಟಿದ್ದಾನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಿರಣ್ ಕನ್ನಡ-೪೩, ಇಂಗ್ಲೀಷ್-೪೧, ಹಿಂದಿ-೩೮, ಗಣಿತ-೩೮, ವಿಜ್ಞಾನ-೩೪, ಸಮಾಜ-೪೫ ಸೇರಿದಂತೆ ೨೩೯ ಅಂಕಗಳನ್ನು ಪಡೆದಿದ್ದ ಕಿರಣ್ ೧೨ ಗಂಟೆಯ ವೇಳೆಗೆ ಪಲಿತಾಂಶವನ್ನು ನೋಡಿ ಪರೀಕ್ಷೆಯಲ್ಲಿ ಪಾಸಾದ ಖುಷಿಯಲ್ಲಿ ಮನೆಯ ಬಳಿಯಿದ್ದ ಬೃಹತ್ ಗಾತ್ರದ ಬಾವಿಗೆ ಸ್ನೇಹಿತರೊಂದಿಗೆ ಈಜಲು ಹೋಗಿ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಕಿರಣ್ ಈಜಲು ಬೆಂಡ್ ಕಟ್ಟಿದ್ದರೂ ಸಹ ಕಿತ್ತು ಹಾಕಿ ಬಾವಿಯಲ್ಲಿ ಈಜುಲು ಹೋಗಿ ಮುಳುಗಿದ್ದಾನೆ. ಆಳದ ಬಾವಿಯಲ್ಲಿ ಮುಳುಗಿರುವ ಕಿರಣ್ ಶವಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಹುಡುಕಾಟ ನಡೆಸುತ್ತಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande