ಕೊರ್ಬಾ - ಯಲಹಂಕ – ಕೊರ್ಬಾ ನಡುವೆ ವಿಶೇಷ ರೈಲು ಸಂಚಾರ
ಬೆಂಗಳೂರು, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೇಸಿಗೆಯ ರಜೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ರೈಲ್ವೆಯು ಕೊರ್ಬಾ ಮತ್ತು ಯಲಹಂಕ ನಡವೆ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಓಡಿಸಲಿದೆ. ರೈಲು ಸಂಖ್ಯೆ 08261 ಕೊರ್ಬಾ - ಯಲಹಂಕ ವಿಶೇಷ ಎಕ್ಸ್ಪ್ರೆಸ್ ರೈಲು ದಿನ
ಕೊರ್ಬಾ - ಯಲಹಂಕ – ಕೊರ್ಬಾ ನಡುವೆ ವಿಶೇಷ ರೈಲು ಸಂಚಾರ


ಬೆಂಗಳೂರು, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೇಸಿಗೆಯ ರಜೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ರೈಲ್ವೆಯು ಕೊರ್ಬಾ ಮತ್ತು ಯಲಹಂಕ ನಡವೆ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಓಡಿಸಲಿದೆ.

ರೈಲು ಸಂಖ್ಯೆ 08261 ಕೊರ್ಬಾ - ಯಲಹಂಕ ವಿಶೇಷ ಎಕ್ಸ್ಪ್ರೆಸ್ ರೈಲು ದಿನಾಂಕ 02.05.2026 (ಶನಿವಾರ) ಬೆಳಿಗ್ಗೆ 9 ಗಂಟೆಗೆ ಕೊರ್ಬಾ ನಿಲ್ದಾಣದಿಂದ ಹೊರಟು ಭಾನುವಾರ ಸಂಜೆ 7 ಗಂಟೆಗೆ ಯಲಹಂಕ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 08262 ಯಲಹಂಕ - ಕೊರ್ಬಾ ವಿಶೇಷ ಎಕ್ಸ್ಪ್ರೆಸ್ ರೈಲು ದಿನಾಂಕ 03.05.2026 (ಭಾನುವಾರ) ರಾತ್ರಿ 9 ಗಂಟೆಗೆ ಯಲಹಂಕ ನಿಲ್ದಾಣದಿಂದ ಹೊರಟು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊರ್ಬಾ ನಿಲ್ದಾಣವನ್ನು ತಲುಪಲಿದೆ.

ಮಾರ್ಗದಲ್ಲಿ ಈ ರೈಲು ಗಳು ಎರಡೂ ದಿಕ್ಕುಗಳಲ್ಲಿ ಚಂಪಾ, ಬಿಲಾಸ್ಪುರ್, ಭಟಪರಾ, ರಾಯ್ಪುರ್, ದುರ್ಗ್, ರಾಜನಂದಗಾಂವ್, ಡೊಂಗರ್ಗಢ, ಗೊಂಡಿಯಾ, ವಾಡ್ಸಾ, ಚಂದಾ ಫೋರ್ಟ್, ಬಲ್ಲಹರ್ಷಾ, ಸಿರ್ಪುರ್ ಕಾಗಜ್ನಗರ, ಮಂಚಿರ್ಯಾಲ್, ಕಾಜಿಪೇಟ್ ಜಂಕ್ಷನ್, ಚರ್ಲಪಲ್ಲಿ, ಸಿಕಂದರಾಬಾದ್, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರ್, ಯಾದಗಿರಿ, ಕೃಷ್ಣಾ, ರಾಯಚೂರು ಜಂಕ್ಷನ್, ಮಂತ್ರಾಲಯಂ ರೋಡ್, ಗುಂತಕಲ್, ಗುತ್ತಿ ಜಂಕ್ಷನ್, ಅನಂತಪುರ, ಧರ್ಮಾವರಂ ಮತ್ತು ಹಿಂದೂಪುರ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತವೆ.

ಈ ರೈಲು ಒಟ್ಟು 20 ಕೋಚ್ಗಳನ್ನು ಒಳಗೊಂಡಿದ್ದು, ನಾಲ್ಕು 3 ಟೈರ್ ಎಸಿ ಬೋಗಿಗಳು, ಹತ್ತು ಸ್ಲೀಪರ್ ಬೋಗಿಗಳು, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ಗಳನ್ನು ಒಳಗೊಂಡಿದೆ ಎಂದು ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಾಣೇಶ ಕೆ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande