ಶಂಕರಬಂಡೆ ಯುವಕ ಕಾಣೆ ; ಪತ್ತೆಗೆ ಮನವಿ
ಬಳ್ಳಾರಿ, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ತಾಲ್ಲೂಕಿನ ಶಂಕರಬಂಡೆ ಗ್ರಾಮದ ರೂಪನಗುಡಿ ರಸ್ತೆಯ ಈಶ್ವರ ಗುಡಿ ಹತ್ತಿರದ 1ನೇ ವಾರ್ಡ್ನ ಹುಬ್ಬಳ್ಳಿ ನಾಗನಗೌಡ (28) ಏಪ್ರಿಲ್ 20 ರಂದು ಸ್ನೇಹಿತನ ಮದುವೆಗೆ ಹೋಗಿ ಬರುವುದಾಗಿ ಹೇಳಿ ಮರಳಿ ಮನೆಗೆ ಹಿಂದಿರುಗಿಲ್ಲ ಎಂದು ಬಳ್ಳಾರಿ ಗ್ರಾಮೀಣ ಪೆÇಲ
ಶಂಕರಬಂಡೆ ಯುವಕ ಕಾಣೆ; ಪತ್ತೆಗೆ ಮನವಿ


ಬಳ್ಳಾರಿ, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ತಾಲ್ಲೂಕಿನ ಶಂಕರಬಂಡೆ ಗ್ರಾಮದ ರೂಪನಗುಡಿ ರಸ್ತೆಯ ಈಶ್ವರ ಗುಡಿ ಹತ್ತಿರದ 1ನೇ ವಾರ್ಡ್ನ ಹುಬ್ಬಳ್ಳಿ ನಾಗನಗೌಡ (28) ಏಪ್ರಿಲ್ 20 ರಂದು ಸ್ನೇಹಿತನ ಮದುವೆಗೆ ಹೋಗಿ ಬರುವುದಾಗಿ ಹೇಳಿ ಮರಳಿ ಮನೆಗೆ ಹಿಂದಿರುಗಿಲ್ಲ ಎಂದು ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೆÇಲೀಸ್ ಸಬ್ಸ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.

ಚಹರೆ ಗುರುತು: ಎತ್ತರ 5.8 ಅಡಿ, ಕೋಲು ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ಕಪ್ಪು ಕೂದಲು ಹೊಂದಿದ್ದು, ಬಲಗೈ ಗೆ ಶಿವನ ಅಚ್ಛೆ ಹಾಕಿಸಿಕೊಂಡಿರುತ್ತಾನೆ.

ಕಾಣೆಯಾದ ಸಂದರ್ಭದಲ್ಲಿ ಅರ್ಧ ತೋಳಿನ ನೀಲಿ ಬಣ್ಣದ ಅಂಗಿ, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮತ್ತು ತೆಲುಗು ಮಾತನಾಡುತ್ತಾನೆ.

ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯ ದೂ.08392-276461, ಮೊ.9480803049 ಅಥವಾ ಬಳ್ಳಾರಿ ಪೆÇಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande