
ಕೋಲಾರ, ೨೩ ಏಪ್ರಿಲ್ (ಹಿ.ಸ) :
ಆ್ಯಂಕರ್ : ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡ ೯೫.೫ರಷ್ಟಯ ಫಲಿತಾಂಶ ಲಭಿಸಿದ್ದು, ರಾಜ್ಯ ಮಟ್ಟದಲ್ಲಿ ಕೋಲಾರ ೧೩ನೇ ಸ್ಥಾನದಲ್ಲಿದೆ. ಜಿಲ್ಲೆಯ ಸರ್ಕಾರಿ,ಖಾಸಗಿ,ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ಪರಿಶ್ರಮದಿಂದಾಗಿ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಗುಣಾತ್ಮಕತೆಯಲ್ಲೂ ಸಾಧನೆಯಾಗಿದು,೩೩೫೩ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ೩೬೫ ವಿದ್ಯಾರ್ಥಿಗಳು ೬೦೦ ವಿಷಯಗಳಲ್ಲಿ ಶೇ.೧೦೦ ಸಾಧನೆ ಮಾಡಿದ್ದಾರೆ. ೮೪೦೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ೩೦೫೨ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಈ ಬಾರಿಯ ಫಲಿತಾಂಶ ಗುಣಾತ್ಮಕತೆಯಲ್ಲೂ ಸಾಧನೆ ಮಾಡಿ ಕಳೆದ ಬಾರಿಯ ಫಲಿತಾಂಶಕ್ಕಿ0ತ ಶೇ.೮ ರಷ್ಟು ಹೆಚ್ಚಳವಾಗಿದೆ.
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಪರೀಕ್ಷೆಗೆ ನೊಂದಾಯಿಸಿದ್ದ ೨೪೮೮ ವಿದ್ಯಾರ್ಥಿಗಳ ಪೈಕಿ ೨೪೫೪ ಮಂದಿ ಉತ್ತೀರ್ಣರಾಗುವ ಮೂಲಕಶೇ.೯೮.೬೩ ಫಲಿತಾಂಶ ಬಂದಿದ್ದು ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದ ತಾಲ್ಲೂಕಾಗಿದೆ.
ಮಾಲೂರು ತಾಲ್ಲೂಕಿನಲ್ಲಿ ೨೭೭೬ ಮಕ್ಕಳು ಪರೀಕ್ಷೆಗೆ ಕುಳಿತಿದ್ದು, ಇದರಲ್ಲಿ ೨೬೮೯ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೯೬.೮೭ ಫಲಿತಾಂಶ ಬಂದಿದ್ದು ಜಿಲ್ಲೆಗೆ ದ್ವಿತೀಯ ಸ್ಥಾನಪಡೆದುಕೊಂಡಿದೆ.
ಮುಳಬಾಗಿಲು ತಾಲೂಕು ಮೂರನೇ ಸ್ಥಾನ ಗಳಿಸಿದ್ದು, ಪರೀಕ್ಷೆಗೆ ಕುಳಿತಿದ್ದ ೨೬೬೦ ಮಂದಿ ಪೈಕಿ೨೫೨೯ ಮಂದಿ ಪಾಸಾಗಿದ್ದು, ಶೇ.೯೫.೦೮ ಫಲಿತಾಂಶದೊ0ದಿಗೆ ಮೂರನೇ ಸ್ಥಾನ ಗಳಿಸಿದೆ.
ಉಳಿದಂತೆ ಬಂಗಾರಪೇಟೆ ತಾಲ್ಲೂಕಿನಲ್ಲಿ ೨೩೫೦ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಇದರಲ್ಲಿ ೨೨೨೨ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೯೪.೫೫ ಫಲಿತಾಂಶ ಪಡೆದುಕೊಂಡಿದೆ.
ಕೋಲಾರ ತಾಲ್ಲೂಕಿನಲ್ಲಿ ಪರೀಕ್ಷೆಗೆ ಕುಳಿತಿದ್ದ ೪೫೨೫ ಮಂದಿ ಪೈಕಿ೪೨೮೫ ಮಂದಿ ಉತ್ತೀರ್ಣರಾಗಿ ಶೇ.೯೫.೭೦ ಫಲಿತಾಂಶ ಲಭ್ಯವಾಗಿದೆ.
ಕೆಜಿಎಫ್ ತಾಲ್ಲೂಕಿನಲ್ಲಿ ಪರೀಕ್ಷೆಗೆ ಕುಳಿತಿದ್ದ ೩೦೭೫ ವಿದ್ಯಾರ್ಥಿಗಳ ಪೈಕಿ೨೯೦೦ ಮಂದಿ ಉತ್ತೀರ್ಣರಾಗಿದ್ದು, ಶೇ.೯೪.೩೧ ಫಲಿತಾಂಶ ಬಂದಿದೆ.
ಚಿನ್ನಯ ವಿದ್ಯಾಲಯದ ಲಕ್ಷಿö್ಮ.ಕೆ.ಎನ್ ೬೨೫ ಅಂಕಗಳಿಗೆ ೬೨೪, ಅದೇ ಶಾಲೆಯ ಕುಶವಂತ್ ೬೨೫ಅಂಕಗಳಿಗೆ ೬೨೩ ಅಂಕಗಳನ್ನು ಗಳಿಸಿದ್ದಾನೆ. ಮುಳಬಾಗಿಲು ತಾಲ್ಲೂಕಿನ ಅಮರ ಜ್ಯೋತಿ ಶಾಲೆಯ ಜೀವಿಕ ೬೨೫ ಅಂಕಗಳ ಪೈಕಿ ೬೨೩ ಅಂಕಗಳನ್ನು ಗಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್