

ಕೊಪ್ಪಳ, 23 ಏಪ್ರಿಲ್ (ಹಿ.ಸ.)
ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಹರ್ಷಿ ಭಗೀರಥ ಜಯಂತಿಯನ್ನು ಜಿಲ್ಲಾಡಳಿತ ಭವನದ ಕೆಸ್ವಾನ್-2ರ ಸಭಾಂಗಣದಲ್ಲಿ ಗುರುವಾರದಂದು ಸರಳವಾಗಿ ಆಚರಿಸಲಾಯಿತು.
ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಕರ್ಣಕುಮಾರ ಕೊಪ್ಪಳ ಜಿಲ್ಲಾ ಭಗೀರಥ ಸಮಾಜದ ಅಧ್ಯಕ್ಷರಾದ ಯಲ್ಲಪ್ಪ ಷಣ್ಮುಖಪ್ಪ ಗದ್ದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ, ತಾಲ್ಲೂಕು ಅಧ್ಯಕ್ಷರಾದ ನಾಗರಾಜ, ಉಪಾಧ್ಯಕ್ಷರಾದ ಹನುಮಂತಪ್ಪ ಬೆಣಕಲ್, ಸಮಾಜದ ಮುಖಂಡರಾದ ಮಲ್ಲಿಕಾರ್ಜುನ, ಹನುಮಪ್ಪ ಕಲಿಕೇರಿ, ಎಂಕಣ್ಣ ಹೆಚ್., ಲಕ್ಷ್ಮೀಕಾಂತ ನಾಲ್ವಾಡ, ನಾಗರಾಜ ಚಳ್ಳೂರು, ಹನುಮಂತಪ್ಪ ಕಲಕೇರಿ, ಯಮನಗೌಡ ಪೋ. ಪಾಟೀಲ, ಸಿದ್ದಪ್ಪ ಕವಲೂರು, ಬಸವರಾಜ, ಮಂಜುನಾಥ ಪಾಟೀಲ, ಶರಣಪ್ಪ ಹಟ್ಟಿ, ಗುದ್ನೆಪ್ಪ ಹೊಸೂರು, ಹೊನ್ನಪ್ಪ ಗೊಡೆಕಾರ್, ಹನುಮಂತಪ್ಪ ಕಟಗಿ, ನಿಂಗಪ್ಪ, ಬಾಲಾಜಿ, ಅಶೋಕ ಸಿಂಧೋಗಿ, ರಾಮಚಂದ್ರಪ್ಪ ಕವಲೂರು ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್