ಕೆಎಸ್ಐಸಿ ಭೂಮಿ ವಾಪಸ್ ; ಜನರ ಹೋರಾಟದ ಗೆಲುವು - ಅಶೋಕ
ಬೆಂಗಳೂರು, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಮೈಸೂರು ರೇಷ್ಮೆ ಪರಂಪರೆಯೊಂದಿಗೆ ಸಂಬಂಧಿಸಿದ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಶನ್ ಭೂಮಿಯನ್ನು ಮರಳಿ ಪಡೆಯುವ ಸರ್ಕಾರದ ನಿರ್ಧಾರವನ್ನು “ಕನ್ನಡಿಗರ ಹೋರಾಟದ ಮಹಾ ಗೆಲುವು” ಎಂದು ಹೇಳಿದ್ದಾರೆ. ಸಾಮಾಜಿಕ
Ashok


ಬೆಂಗಳೂರು, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಮೈಸೂರು ರೇಷ್ಮೆ ಪರಂಪರೆಯೊಂದಿಗೆ ಸಂಬಂಧಿಸಿದ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಶನ್ ಭೂಮಿಯನ್ನು ಮರಳಿ ಪಡೆಯುವ ಸರ್ಕಾರದ ನಿರ್ಧಾರವನ್ನು “ಕನ್ನಡಿಗರ ಹೋರಾಟದ ಮಹಾ ಗೆಲುವು” ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕ್ರೀಡಾ ಇಲಾಖೆಗೆ ಹಸ್ತಾಂತರವಾಗಿದ್ದ ಕೆಎಸ್ಐಸಿ ಭೂಮಿಯನ್ನು ಇದೀಗ ಅಧಿಕೃತವಾಗಿ ಮರಳಿ ಪಡೆದಿರುವುದು ಮೈಸೂರು ಸಿಲ್ಕ್ ಅಸ್ಮಿತೆ ಮತ್ತು ಸಾವಿರಾರು ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಿದಂತಾಗಿದೆ ಎಂದು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಈ ವಿಷಯವನ್ನು ಮೊದಲಿನಿಂದಲೂ ಎತ್ತಿ ಹಿಡಿದಿದ್ದೇನೆ ಎಂದು ಹೇಳಿದ ಅವರು, ಕಾರ್ಮಿಕರು, ಪರಿಸರವಾದಿಗಳು ಮತ್ತು ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದೇವೆ ಎಂದರು. ಸದನದ ಒಳಗೆ ಹಾಗೂ ಹೊರಗೆ ನಡೆದ ಹೋರಾಟ ಮತ್ತು ಸಾರ್ವಜನಿಕರ ಬೆಂಬಲದ ಫಲವಾಗಿ ಸರ್ಕಾರ ತನ್ನ ನಿರ್ಧಾರವನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ಮೈಸೂರು ಸಿಲ್ಕ್ ಕೇವಲ ಒಂದು ಬ್ರಾಂಡ್ ಅಲ್ಲ, ಅದು ಕನ್ನಡಿಗರ ಹೆಮ್ಮೆ ಮತ್ತು ಸಂಸ್ಕೃತಿಯ ಸಂಕೇತ ಎಂದು ಒತ್ತಿ ಹೇಳಿದ ಅಶೋಕ, ಈ ಪರಂಪರೆಗೆ ಧಕ್ಕೆಯುಂಟು ಮಾಡುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂಬ ಸಂದೇಶ ಈ ಹೋರಾಟ ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದು ಕೇವಲ ಆಡಳಿತಾತ್ಮಕ ಬದಲಾವಣೆ ಅಲ್ಲ, ಜನರ ಇಚ್ಛಾಶಕ್ತಿಯ ಜಯ ಎಂದು ಹೇಳಿದ ಅವರು, ಈ ಸಾಧನೆ ಕಾರ್ಮಿಕರು ಹಾಗೂ ಹೋರಾಟಕ್ಕೆ ಕೈಜೋಡಿಸಿದ ಪ್ರತಿಯೊಬ್ಬ ಕನ್ನಡಿಗನಿಗೂ ಸಲ್ಲುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಕೆಎಸ್ಐಸಿ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸಲು ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande