
ಬಳ್ಳಾರಿ, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಾನು ಬಿಜೆಪಿಯಲ್ಲಿಲ್ಲ. ಬಿಜೆಪಿಯಲ್ಲಿ ಹಿಂದುತ್ವಕ್ಕೆ ಬೆಲೆ ಇಲ್ಲ. ಬಿಜೆಪಿ ಶುದ್ಧೀಕರಣ ಆಗಬೇಕು ಎನ್ನುವ ವಿಚಾರಕ್ಕಾಗಿ ನಾನು ಬಿಜೆಪಿ ಬಿಟ್ಟು ಬಂದಿರುವೆ. ಬಿಜೆಪಿ ಶುದ್ಧೀಕರಣ ಆದಲ್ಲಿ ಮಾತ್ರ ಆ ಪಕ್ಷಕ್ಕೆ ಪುನಃ ಸೇರುವ ಕುರಿತು ಚಿಂತನೆ ನಡೆಸುವೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆಯಲ್ಲಿ ಗುರವಾರ ಮಾತನಾಡಿದ ಅವರು, ಬಿಜೆಪಿಯವರಿಗೆ ಕೇಳುವ ಪ್ರಶ್ನೆಯನ್ನು ನನಗೆ ಕೇಳಬೇಡಿ. ಸಾಮೂಹಿಕ ನಾಯಕತ್ವಕ್ಕೆ ಬಿಜೆಪಿಯಲ್ಲಿ ಬೆಲೆ ಇಲ್ಲ. ಕುಟುಂಬ ಕೇಂದ್ರ ರಾಜಕೀಯಕ್ಕೆ ಬೆಲೆ ಇದೆ. ಕಾರಣ ನಾನು ಹೊರಗಡೆ ಬಂದಿರುವೆ. ನಾನು, ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್