ಎಸ್ಎಸ್ಎಲ್ಸಿ ಮಹಿಳಾ ಸಮಾಜ ಪ್ರೌಢ ಶಾಲೆಗೆ ಶೇ.೧೦೦ ಫಲಿತಾಂಶ
ಎಸ್ಎಸ್ಎಲ್ಸಿ ಮಹಿಳಾ ಸಮಾಜ ಪ್ರೌಢ ಶಾಲೆಗೆ ಶೇ.೧೦೦ ಫಲಿತಾಂಶ
ಮಹಿಳಾ ಸಮಾಜ ಪ್ರೌಢ ಶಾಲೆಯ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳು1


ಕೋಲಾರ,ಏ.೨೩:

ಆ್ಯಂಕರ್ : ಮಹಿಳಾ ಸಮಾಜ ಪ್ರೌಡ ಶಾಲೆಯ ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಅತ್ಯಂತ ಉತ್ತಮವಾಗಿದ್ದು, ಶಾಲೆಯು ಅತ್ಯುನ್ನತ ಸಾಧನೆಯನ್ನು ದಾಖಲಿಸಿದೆ.

ಈ ವರ್ಷ ಶಾಲೆಯಿಂದ ಪರೀಕ್ಷೆಗೆ ಹಾಜರಾದ ಒಟ್ಟು ೧೨೬ ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ ೧೦೦ರಷ್ಟು ಫಲಿತಾಂಶವನ್ನು ಸಾಧಿಸಲಾಗಿದೆ. ಇದರಲ್ಲಿ ೩೧ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೭೬ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಲೆಯ ವಿದ್ಯಾರ್ಥಿ ಶ್ರೀಕುಮಾರ್ ಸಿ ೬೧೯ ಅಂಕಗಳನ್ನು ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಆಕಾಶ್ ಪಿ ೬೧೩ ಅಂಕಗಳು ಹಾಗೂ ತೃತೀಯ ಸ್ಥಾನವನ್ನು ಮಮತಾ ಜಿ ೬೦೬ ಅಂಕಗಳು, ಯುಸ್ರಾ ರಿಫತ್ ೬೦೩ ನಾಲ್ಕನೇ ಸ್ಥಾನ, ಲಕ್ಷ ಎಲ್ ೬೦೨ ಐದನೇ ಸ್ಥಾನ ಪಡೆದಿದ್ದಾರೆ.

ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದಿಸಿದ್ದು, ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande