
ಗಂಗಾವತಿ, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗು ಶೈಕ್ಷಣಿಕವಾಗಿ ಮುಂದೆ ಬರಬೇಕಿರುವ ಉಪ್ಪಾರ ಸಮಾಜ ಸರ್ವ ಜನಾಂಗದ ಒಡನಾಡಿಯಾಗಿ ಸಹೋದರತೆಯಿಂದ ಬಾಳುತ್ತಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ನಗರದ ಶ್ರೀ ಭಗೀರಥ ವೃತ್ತದಲ್ಲಿ ಶ್ರೀ ಭಗೀರಥ ರಾಜಋಷಿ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣವೇ ಶಕ್ತಿಯಾಗಿದ್ದು ಎಲ್ಲರು ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ನಮ್ಮ ಅವಧಿಯಲ್ಲಿ ಸಮಾಜಕ್ಕೆ ಕೈಲಾದ ಮಟ್ಟಿಗೆ ನೆರವಾಗಿದ್ದೇನೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಮಾತನಾಡಿ, ದೇವ ಗಂಗೆಯನ್ನು ಧರೆಗಿಳಿಸಿದ ಸಮಾಜ ಸತತ ಪ್ರಯತ್ನಕ್ಕೆ ಹೆಸರುವಾಸಿಯಾಗಿದೆ, ಸಮಾಜದ ಪ್ರಮುಖರಾದ ದುರುಗಪ್ಪ ಅಮರಜ್ಯೋತಿ ಇವರು ಪುರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಗಂಗಾವತಿ ಬೈಪಾಸ್ ರಸ್ತೆ, ಮುರಹರಿ ನಗರ ಹಾಗು ಗುಂಡಮ್ಮ ಕ್ಯಾಂಪ್ಗಳಲ್ಲಿ ಸರ್ವ ಜನಾಂಗಕ್ಕೂ ನಿವೇಶನ ನೀಡಿದ್ದಾರೆಂದರು.
ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಮೊದಲು ಉಪ್ಪು ಮಾರು ವೃತ್ತಿಯಲ್ಲಿದ್ದ ಈ ಜನಾಂಗ ಪ್ರಪಂಚಕ್ಕೆ ರುಚಿಯನ್ನು ತೋರಿಸಿತು ಬಳಿಕ ವಿವಿಧ ವೃತ್ತಿಗಳಿಗೆ ಹಂಚಿ ಹೋಗಿದ್ದು ಈ ಜನಾಂಗದ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅನುದಾನ ನೀಡಬೇಕೆಂದು ಸಲಹೆ ನೀಡಿದರು.
ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ ಮಾತನಾಡಿ, ಸಮಾಜ ಮೇಲ್ಮಟ್ಟಕ್ಕೇರುವ ಕುರಿತು ಚಿಂತನ ಮಂಥನ ನಡೆಸಬೇಕು, ಒಗ್ಗಟ್ಟಿನಿಂದ ಏನನ್ನಾದರೂ ಸಾಧಿಸಲು ಸಾಧ್ಯವಿದ್ದು, ಪರಸ್ಪರ ಸಹಕಾರದಿಂದ ಎಲ್ಲ ರಂಗದಲ್ಲಿ ಸಮಾಜ ಮುಂದರೆ ಬರಲಿ ಎಂದು ಹಾರೈಸಿದರು.
ಬಿಜೆಪಿ ಮುಖಂಡರಾದ ಮನೋಹರಗೌಡ ಹೇರೂರು ಮಾತನಾಡಿ, ಸತತ ಶ್ರಮದಿಂದ ಮೇಲೆ ಬರುತ್ತಿರುವ ಉಪ್ಪಾರ ಸಮಾಜ ಶ್ರಮಜೀವಿಗಳು ಎಂದರು.
ಮಕ್ಕಳ ತಜ್ಞರಾದ ಡಾ.ಅಮರ್ ಮಾತನಾಡಿ, ಉಪ್ಪಾರ ಸಮಾಜಕ್ಕೆ ಸೂಕ್ತ ರಾಜಕೀಯ ವೇದಿಕೆ ದೊರೆಯಬೇಕಿದೆ, ಏನನ್ನಾದರೂ ಸಾಧಿಸುವ ಛಲ ಹೊಂದಿದ ಜನಾನುರಾಗಿ ಜನಾಂಗ ಎಂದು ಶ್ಲಾಘೀಸಿದರು.
ಕಾಡಾ ಮಾಜಿ ಅಧ್ಯಕ್ಷ ಹೆಚ್.ಗಿರೇಗೌಡ್ರು, ಶ್ರೀ ಭಗೀರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರಸಪ್ಪ ಅಮರಜ್ಯೋತಿ, ನಗರಸಭೆ ಮಾಜಿ ಸದಸ್ಯರಾದ ವಾಸುಕೊಳಗದ, ನೀಲಕಂಠಪ್ಪ ಕಟ್ಟಿಮನಿ, ಉಮೇಶ್ ಸಿಂಗನಾಳ್, ತಾಲೂಕು ಉಪ್ಪಾರ ಸಮಾಜದ ಗೌರವಧ್ಯಕ್ಷ ಯಲ್ಲಪ್ಪ ಕಟ್ಟಿಮನಿ, ಅಧ್ಯಕ್ಷ ವೆಂಕಟೇಶ್ ಅಮರಜ್ಯೋತಿ, ಕಾರ್ಯಾಧ್ಯಕ್ಷ ಮುಕ್ಕಣ್ಣ ಮಾನಳ್ಳಿ, ಮುಖಂಡರಾದ ಯುವ ಲಕ್ಷ್ಮಣ, ಬಜಾರ್ ನಾರಾಯಣಪ್ಪ, ಮುಖಂಡರಾದ ಯಂಕಪ್ಪ ಕಟ್ಟಿಮನಿ, ಯಮನೂರಪ್ಪ ಹುಲಿಗಿ, ಮಹೇಶ್ ಸಾಗರ್, ನಾಗರಾಜ್ ಇಂಗಳಗಿ, ಕುರಿತಲಿ ರಾಮಣ್ಣ, ವಿ.ಸತ್ಯನಾರಾಯಣ, ರಂಗಸ್ವಾಮಿ ಇಂಗಳಗಿ, ಗೋವಿಂದಪ್ಪ ಹುಲಿಗಿ, ಶರಣಪ್ಪ ಮಿಣಿಜಿಗಿ ವಕೀಲರು, ಪಂಪಾಪತಿ ಇಂಗಳಗಿ, ನಿರುಪಾದಿ ಇಂಗಳದಾಳ, ನೌಕರರ ಸಂಘದ ದೇವಪ್ಪ ಶಿಕ್ಷಕರು, ಮಲ್ಲಪ್ಪ ಉಪ್ಪಾರ, ಕನಕಪ್ಪ ಉಪ್ಪಾರ, ರಾಜಪ್ಪ ಹುಲಿಗಿ, ಹನುಮಂತಪ್ಪ ಆದಾಪುರ, ಯಂಕಪ್ಪ ಪೂಜಾರ್, ಶರಣಪ್ಪ ವಿರುಪಾಪುರ,
ಇದಕ್ಕೆ ಮುನ್ನಾ ನಗರದ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ತಾಶಾ ಬಾಜಹಾ ಭಜಂತ್ರಿಯೊಂದಿಗೆ 101 ಕುಂಬ ಕಳಸ ಹೊತ್ತ ಮಹಿಳೆಯರು ಶ್ರೀ ಭಗೀರಥ ರಾಜ ಋಷಿ ಭಾವಚಿತ್ರದ ಮೆರವಣೆಗೆಯೊಂದಿಗೆ ಶ್ರೀ ಭಗೀರಥ ವೃತ್ತದ ಮೂಲಕ ಉಪ್ಪಾರ ಸಮಾಜದ ಶ್ರೀ ಸೀತಾರಾಮಾಂಜನೇಯ್ಯ ದೇವಸ್ಥಾನ ತಲುಪಿದರು. ಬಳಿಕ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಅನ್ನ ಸಂತರ್ಪಣೆ ಜರುಗಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್