ಚಿನ್ಮಯ ಶಾಲೆಯ ಟಾಪರ್ ವಿದ್ಯಾರ್ಥಿ ಕೆ.ಎನ್.ಲಕ್ಷ್ಮಿ ಗೆ ಅಭಿನಂದನೆ
ಚಿನ್ಮಯ ಶಾಲೆಯ ಟಾಪರ್ ವಿದ್ಯಾರ್ಥಿ ಕೆ.ಎನ್.ಲಕ್ಷಿö್ಮ ಗೆ ಅಭಿನಂದನೆ
ಕೋಲಾರದ ಚಿನ್ಮಯ ವಿದ್ಯಾಲಯದ ಕೆ.ಎನ್.ಲಕ್ಷಿö್ಮ ರವರನ್ನು ಸಮಾಜಸೇವಕ ಸಿಎಂಆರ್.ಶ್ರೀನಾಥ್ ಅಭಿನಂದಿಸಿದರು.


ಕೋಲಾರ, ೨೩ ಏಪ್ರಿಲ್ (ಹಿ.ಸ) :

ಆ್ಯಂಕರ್ : ಕೋಲಾರದ ಚಿನ್ಮಯ ವಿದ್ಯಾಲಯದ ಕೆ.ಎನ್.ಲಕ್ಷ್ಮಿ ೬೨೫ಕ್ಕೆ ೬೨೪ ಅಂಕಗಳೊ0ದಿಗೆ ಜಿಲ್ಲೆಗೆ ಟಾಫರ್ ಆಗಿರುವ ಹಿನ್ನಲೆಯಲ್ಲಿ ಸಮಾಜಸೇವಕ ಸಿಎಂಆರ್.ಶ್ರೀನಾಥ್ ಕೀಲುಕೋಟೆಯ ಅವರ ನಿವಾಸಕ್ಕೆ ತೆರಳಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ೬೨೪ ಅಂಕಗಳೊ0ದಿಗೆ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿ ಸಾಧನೆ ಮಾಡಿರುವ ಲಕ್ಷಿö್ಮ ಮುಂದಿನ ದಿನಗಳಲ್ಲಿ ದ್ವಿತೀಯ ಪಿಯುಸಿಯಲ್ಲೂ ಇದೇ ಸಾಧನೆ ಮುಂದುವರೆಸಲಿ ಎಂದು ಹಾರೈಸಿದರು.

ಕೋಲಾರ ಜಿಲ್ಲೆ ಐಎಎಸ್, ಕೆಎಎಸ್ ಅಭ್ಯರ್ಥಿಗಳ ತವರಾಗಿದ್ದು, ಇಲ್ಲಿ ನೀವು ಸಹಾ ಅಂತಹ ಸಾಧಕಿಯಾಗಿ ಹೊರಹೊಮ್ಮಿ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಸಲಹೆ ನೀಡಿದ ಸಿಎಂ.ಆರ್.ಶ್ರೀನಾಥ್, ೫ ವಿಷಯಗಳಲ್ಲಿ ಶೇ.೧೦೦ ಸಾಧನೆ ಮಾಡುವುದು ಸುಲಭದ ಮಾತಲ್ಲ ನೀವು ಜಿಲ್ಲೆಯ ಇತರೆ ವಿದ್ಯಾರ್ಥಿಗಳಿಗೆ ಆದರ್ಶವಾಗಿ ಎಂದು ಕಿವಿಮಾತು ಹೇಳಿದರು.

ನಗರದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿಯ ಪೋಷಕರಾದ ಮೂಲತಃ ಕೆಜಿಎಫ್ ತಾಲ್ಲೂಕಿನ ಕಂಗಾನಲ್ಲೂರು ಗ್ರಾಮದ ಹಾಗೂ ಈಗ ಕೋಲಾರದ ಕೀಲುಕೋಟೆ ನಿವಾಸಿಗಳಾದ ನಾಗರಾಜ್, ನಾಗವೇಣಿ ಶಿಕ್ಷಕ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿ, ಮಗಳಿಗೆ ನೀಡಿರುವ ಪ್ರೋತ್ಸಾಹ ಎಲ್ಲಾ ಮಕ್ಕಳಿಗೂ ಅವರ ತಂದೆತಾಯಿಗಳು ನೀಡುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಎಸ್.ಸುಧಾಕರ್, ಮುಖಂಡ ಬಣಕನಹಳ್ಳಿ ನಟರಾಜ್, ಪತ್ರಕರ್ತ ಕೆ.ಎಸ್.ಗಣೇಶ್, ಬೆಟ್ಟಪ್ಪ ಮತ್ತಿತರರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande