ಕಾರಟಗಿ : ಕೇಂಬ್ರಿಡ್ಜ್ ಪಬ್ಲಿಕ್ ಶಾಲೆ ಶೇ.100% ಫಲಿತಾಂಶ
ಕಾರಟಗಿ, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : 2025-26 ಸಾಲಿನ ಎಸ್.ಎಸ್.ಎಲ್.ಸಿ., ಪರೀಕ್ಷಾ ಫಲಿತಾಂಶದಲ್ಲಿ ತಾಲೂಕಿಗೆ ಸತತ ಮೂರು ವರ್ಷಗಳು ಶೇ.100% ಫಲಿತಾಂಶ ಮತ್ತು ಅತ್ಯಧಿಕ ಅಂಕದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ವಿದ್ಯಾರ್
ಕಾರಟಗಿ : ಕೇಂಬ್ರಿಡ್ಜ್ ಪಬ್ಲಿಕ್ ಶಾಲೆ ಶೇ.100% ಫಲಿತಾಂಶ


ಕಾರಟಗಿ, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2025-26 ಸಾಲಿನ ಎಸ್.ಎಸ್.ಎಲ್.ಸಿ., ಪರೀಕ್ಷಾ ಫಲಿತಾಂಶದಲ್ಲಿ ತಾಲೂಕಿಗೆ ಸತತ ಮೂರು ವರ್ಷಗಳು ಶೇ.100% ಫಲಿತಾಂಶ ಮತ್ತು ಅತ್ಯಧಿಕ ಅಂಕದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್

ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಯಲ್ಲಿ ಸತತ 3ನೇ ಬಾರಿ ಶೇ.100% ಉತ್ತೀರ್ಣ ಫಲಿತಾಂಶ ಹಾಗೂ ಕಾರಟಗಿ ತಾಲೂಕಿಗೆ ಮೊದಲನೇ ಸ್ಥಾನವನ್ನ ಕಾಯ್ದುಕೊಂಡು ಗಮನಾರ್ಹ ಸಾಧನೆ ಮಾಡಿದ್ದಾರೆ.

ನಮ್ಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಶ್ರೀಯಾ ಮಿರ್ಜಾಕರ್ 616/625 (98.56%) ಅಂಕಗಳೊಂದಿಗೆ ಕಾರಟಗಿ ತಾಲೂಕಿಗೆ ಪ್ರಥಮ ಸ್ಥಾನ, ಕೊಪ್ಪಳ ಜಿಲ್ಲೆಗೆ ನಾಲ್ಕನೇ ಸ್ಥಾನ ಹಾಗೂ ರಾಜ್ಯಕ್ಕೆ ಒಂಬತ್ತನೇ ಸ್ಥಾನ ಪಡೆದಿದ್ದಾಳೆ. ಇದು ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದ ಫಲವಾಗಿದೆ.

ಪ್ರಮುಖ ಸಾಧಕರು:

ಶ್ರೀಯಾ ಮಿರ್ಜಾಕರ್ – 616/625 (98.56%)

ಶ್ರಾವ್ಯ ಸಂಗಪ್ಪ – 608/625 (97.28%)

ಶಂಭಾವಿ – 578/625 (92.48%)

ಪದ್ಮಶ್ರೀ – 576/625 (92.16%)

ಐಶ್ವರ್ಯ – 570/625 (91.02%)

ಮೇಘನಾ – 568/625 (90.88%)

ರಘುನಂದನ್ ಸಿಂಗ್ – 563/625 (90.08%)

ಎಮ್.ಡಿ. ಲಿಯಾಖತ್ – 558/625 (89.28%)

ಈ ಸಾಧನೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸಮೂಹ ಪ್ರಯತ್ನ ಕಾರಣ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande