
ಬೆಂಗಳೂರು, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಾತಪಸ್ವಿ ಭಗೀರಥ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ತಮ್ಮ ಅಚಲ ಭಕ್ತಿಯಿಂದ ಸಾಕ್ಷಾತ್ ಗಂಗಾ ನದಿಯನ್ನು ಧರೆಗಿಳಿಸಿದ ಭಗೀರಥರ ಶ್ರದ್ಧೆ ಮತ್ತು ಸಂಕಲ್ಪವನ್ನು ಈ ದಿನ ಭಕ್ತಿಪೂರ್ವಕವಾಗಿ ಸ್ಮರಿಸುತ್ತೇವೆ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ. ಭಗೀರಥರ ತಪಸ್ಸು ಮಾನವ ಸಂಕಲ್ಪದ ಶಕ್ತಿಗೆ ಶಾಶ್ವತ ಮಾದರಿಯಾಗಿದ್ದು, ಸಮಾಜದ ಒಳಿತಿಗಾಗಿ ಮಾಡಿದ ಪ್ರಯತ್ನಗಳು ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದನ್ನು ಅವರು ಒತ್ತಿಹೇಳಿದ್ದಾರೆ.
ಭಗೀರಥ ಜಯಂತಿ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ನೆನಪಿಸುವ ಪವಿತ್ರ ದಿನವಾಗಿದ್ದು, ಪ್ರತಿಯೊಬ್ಬರೂ ಧೈರ್ಯ, ನಿಷ್ಠೆ ಹಾಗೂ ಸೇವಾಭಾವದಿಂದ ಜೀವನ ನಡೆಸುವಂತೆ ಕರೆ ನೀಡಿದ್ದು, ರಾಜ್ಯದ ಸಮಸ್ತ ಜನತೆಗೆ ಭಗೀರಥ ಜಯಂತಿಯ ಶುಭಾಶಯಗಳನ್ನು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa