ಹಾಸ್ಯಬ್ರಹ್ಮ ಬೀಚಿ ಸ್ಮರಣೆ ; ಎಚ್.ಡಿ. ಕುಮಾರಸ್ವಾಮಿ ನಮನ
ಬೆಂಗಳೂರು, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕನ್ನಡ ಸಾಹಿತ್ಯ ಲೋಕದ ಹಾಸ್ಯಬ್ರಹ್ಮ ಎಂದು ಖ್ಯಾತಿ ಪಡೆದ ಬೀಚಿ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಬೀಚಿ ತಮ್ಮ ವಿಡಂಬನ
Hdk


ಬೆಂಗಳೂರು, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕನ್ನಡ ಸಾಹಿತ್ಯ ಲೋಕದ ಹಾಸ್ಯಬ್ರಹ್ಮ ಎಂದು ಖ್ಯಾತಿ ಪಡೆದ ಬೀಚಿ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಬೀಚಿ ತಮ್ಮ ವಿಡಂಬನಾತ್ಮಕ ಹಾಗೂ ಮೊನಚಾದ ಬರವಣಿಗೆಯ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಯತ್ನಿಸಿದ ಅಪರೂಪದ ಸಾಹಿತಿ ಎಂದು ಪ್ರಶಂಸಿಸಿದ್ದಾರೆ. ಅವರ ಕೃತಿಗಳಲ್ಲಿ ಮೂಡಿಬಂದ ಹಾಸ್ಯವೂ, ಸಾಮಾಜಿಕ ಚಿಂತನೆಯೂ ಇಂದಿಗೂ ಓದುಗರ ಮನಸ್ಸಿನಲ್ಲಿ ಜೀವಂತವಾಗಿವೆ ಎಂದು ತಿಳಿಸಿದ್ದಾರೆ.

ಬೀಚಿ ಅವರು ಸೃಷ್ಟಿಸಿದ “ತಿಮ್ಮ” ಪಾತ್ರವನ್ನು ಮರೆಯಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ ಕುಮಾರಸ್ವಾಮಿ, ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪ್ರತಿಮವಾಗಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande