ಬೆಮೆಲ್ ನಿವೃತ್ತ ನೌಕರ ರಾಮಸ್ವಾಮಿ ನಿಧನ
ಬೆಮೆಲ್ ನಿವೃತ್ತ ನೌಕರ ರಾಮಸ್ವಾಮಿ ನಿಧನ
ಕೆ.ವೈ. ರಾಮಸ್ವಾಮಿ


ಕೋಲಾರ, ಏಪ್ರಿಲ್ ೨೩ (ಹಿ.ಸ) :

ಆ್ಯಂಕರ್ : ನಗರದ ಖ್ಯಾತ ಉದ್ಯಮಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಗಿರಿಜಮ್ಮ ಅವರ ಪತಿ ಕೆ.ವೈ. ರಾಮಸ್ವಾಮಿ ಅವರು ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಕೆಜಿಎಫ್ನ ಬೆಮಲ್ ಉದ್ಯೋಗಿಯಾಗಿದ್ದರು. ದಿವಂಗತ ಸಿ.ಬೈರೇಗೌಡ ಹಾಗೂ ಕೋಲಾರ ಮಾಜಿ ಶಾಸಕ ಶ್ರೀನಿವಾಸಗೌಡರ ಆತ್ಮೀಯ ಮಿತ್ರರಾಗಿದ್ದಾರೆ.

ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿಯ ಕರೇನಹಳ್ಳಿ ಗ್ರಾಮದಲ್ಲಿ ಜನಿಸಿದ ರಾಮಸ್ವಾಮಿ ಕೋಲಾರದಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಬೆಮೆಲ್ ನಲ್ಲಿ ಉದ್ಯೋಗಕ್ಕೆ ಸೇರಿದರು. ಅಂದಿನ ದಿನಗಳಲ್ಲಿ ದಿವಂಗತ ಬೈರೇಗೌಡ ಮತ್ತು ಶ್ರೀನಿವಾಸಗೌಡರ ಒಡನಾಟ ಹೊಂದಿದ್ದರು. ಮೃತರು ಕೋಲಾರ ಗೌರಿಪೇಟೆಯ ಸಿಎಂಸಿ ಚಿಕ್ಕಣ್ಣನವರ ಅಳಿಯ ಆಗಿದ್ದರು.

ನಗರದ ಪಿ.ಸಿ.ಬಡಾವಣೆಯಲ್ಲಿ ವಾಸವಿದ್ದು ಪತ್ನಿ, ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ವಿಶೇಷವಾಗಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಆತ್ಮಿಯರಾಗಿದ್ದರು. ಅಂತಿಮ ದರ್ಶನಕ್ಕಾಗಿ ಜಯನಗರದ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ೪ ಗಂಟೆಗೆ ತಾಲೂಕಿನ ಹೊಗರಿ ಗೊಲ್ಲಹಳ್ಳಿ ಓಂ ಶಿವ ಶಕ್ತಿ ಫೌಲ್ಟ್ರಿ ಫಾರ್ಮ್ನಲ್ಲಿ ಅಂತ್ಯಕ್ರಿಯೆ ಜರುಗಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande