ಕನಕಗಿರಿ ಉತ್ಸವ - ಸ್ಥಳೀಯರಿಗೆ ಆದ್ಯತೆ ನೀಡಲು ಇಂಗಳಗಿ ಒತ್ತಾಯ
ಗಂಗಾವತಿ, 22 ಏಪ್ರಿಲ್ (ಹಿ.ಸ.) : ಆ್ಯಂಕರ್ : ಐತಿಹಾಸಿಕ ಕನಕಗಿರಿ ಉತ್ಸವವನ್ನು ಮೇ-09 ಮತ್ತು 10 ರಂದು ಆಚರಿಸಲು ಉದ್ದೇಶಿಸಲಾಗಿದ್ದು, ನಶಿಸುತ್ತಿರುವ ಕಲೆಗಳ ಜೊತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರತರ್ಕರ ಸಂಘ ಗಂಗಾವತಿ ತಾಲೂಕು ಘಟಕದ ಗೌರವಧ್ಯಕ್ಷ
ಕನಕಗಿರಿ ಉತ್ಸವ - ಸ್ಥಳೀಯರಿಗೆ ಆದ್ಯತೆ ನೀಡಲು ಇಂಗಳಗಿ ಒತ್ತಾಯ


ಗಂಗಾವತಿ, 22 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಐತಿಹಾಸಿಕ ಕನಕಗಿರಿ ಉತ್ಸವವನ್ನು ಮೇ-09 ಮತ್ತು 10 ರಂದು ಆಚರಿಸಲು ಉದ್ದೇಶಿಸಲಾಗಿದ್ದು, ನಶಿಸುತ್ತಿರುವ ಕಲೆಗಳ ಜೊತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರತರ್ಕರ ಸಂಘ ಗಂಗಾವತಿ ತಾಲೂಕು ಘಟಕದ ಗೌರವಧ್ಯಕ್ಷ ಹಾಗು ಕೊಪ್ಪಳ ಜಿಲ್ಲಾ ಕಲಾವಿದರ ವೇದಿಕೆ ಅಧ್ಯಕ್ಷ ನಾಗರಾಜ್ ಇಂಗಳಗಿ ಆಗ್ರಹಿಸಿದ್ದಾರೆ.

ಈ ಕುರಿತು ಅವರು, ನಾಡಿನಾದ್ಯಂತ ಆಚರಣೆಗೊಳ್ಳುವ ಉತ್ಸವಗಳಲ್ಲಿ ನಮ್ಮ ಭಾಗದ ಕಲಾವಿದರಿಗೆ ವೇದಿಕೆ ಒದಗಿಸದೆ ನಿರ್ಲಕ್ಷ್ಯ ತಾಳುತ್ತಿದ್ದು ಇದರಿಂದ ಪ್ರತಿಭಾವಂತ ಕಲಾವಿದರು ಮೂಲೆಗುಂಪಾಗುತ್ತಿದ್ದಾರೆ. ಹಂಪಿ ಉತ್ಸವದಲ್ಲಿ ಬೆಂಗಳೂರು ಮೈಸೂರು ಭಾಗದ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಿ, ಸ್ಥಳೀಯರನ್ನು ಸಂಪೂರ್ಣ ಕಡೆಗಣಿಸಲಾಗಿತ್ತು.

ಕನಕಗಿರಿ ಉತ್ಸವದಲ್ಲಿ ಮರುಕಳಿಸಬಾರದು, ಸಾಕಷ್ಟು ಮುತುವರ್ಜಿ ವಹಿಸಿ ಅಧಿಕಾರಿಗಳು ಇಲ್ಲಿನ ಕಲಾವಿದರಿಗೆ ಹೆಚ್ಚು ಅವಕಾಶ ಒದಗಿಸಬೇಕು, ವರ್ಷವಿಡೀ ಕಲಾ ಸೇವೆಯಲ್ಲಿ ತೊಡಗಿದವರನ್ನು ಗುರುತಿಸಬೇಕು, ನಶಿಸುತ್ತಿರುವ ಜಾನಪದ ಕಲೆಗಳು, ಡೆಪ್ಪಿನಾಟ, ಬಯಲಾಟ, ಸಣ್ಣಾಟ ಇತರೆ ಕಲೆಗಳಿಗೆ ವೇದಿಕೆ ಒದಗಿಸಿ ಪ್ರೋತ್ಸಾಹಿಸಬೇಕು ಇಂಥಕಲೆಗಳ ಜೀವಂತಿಕೆಗೆ ಉತ್ಸವಗಳು ಸೂಕ್ತ ವೇದಿಕೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande