

ಕೊಪ್ಪಳ, 22 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ, ಕೇಂದ್ರ ಪರಿಸರ ಇಲಾಖೆ ಶಿಫಾರಸಿನಂತೆ ಅಲ್ಲಾನಗರ, ಹಿರೇಬಗನಾಳ ಸುತ್ತಲಿನ ಸ್ಪಾಂಜ್ ಐರನ್ ಘಟಕಗಳ ಸ್ಥಳಾಂತರಕ್ಕೆ ಆಗ್ರಹಿಸಿ, ಬಸಾಪುರ ಕೆರೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ, ನಗರ ಸಮೀಪದ ಬಲ್ಡೋಟ ಎಂ.ಎಸ್.ಪಿ.ಎಲ್ ಪೆಲ್ಲೆಟ್ ಘಟಕ ಬಂದ್ ಮಾಡಬೇಕೆಂದು 174ನೇ ದಿನದಿಂದ ನಡೆಯುತ್ತಿರುವ ಧರಣಿ ಹೋರಾಟಕ್ಕೆ ಬಿ. ಹೊಸಳ್ಳಿ ಗ್ರಾಮ ಯುವಕ ಸಂಘ ಬೆಂಬಲಿಸಿತು.
ಯುವಕ ಸಂಘ ಮುಖಂಡ ನಾಗರಾಜ ದೊಡ್ಡಮನಿ ಮಾತನಾಡಿ, ಬಿ. ಹೊಸಳ್ಳಿ ಗ್ರಾಮದ ಕೃಷಿ ಬೆಳೆಗಳು ಕಾರ್ಖಾನೆ ಧೂಳು ಬೀಳುವುದರಿಂದ ಹಾಳಾಗುತ್ತಿವೆ. ಇಳುವರಿ ಬರುವುದಿಲ್ಲ. ಬೆಳೆ ಬಂದರೂ ಕಳಪೆ ಗುಣಮಟ್ಟದ ಕಾರಣದಿಂದ ಮಾರುಕಟ್ಟೆಯಲ್ಲಿ ಮಾರುವುದಿಲ್ಲ. ಈ ಸ್ಪಾಂಜ್ ಐರನ್, ವಿದ್ಯುತ್, ಉಕ್ಕು ತಯಾರಿಸುವ ಘಟಕಗಳನ್ನು ತಕ್ಷಣದಿಂದಲೇ ಮುಚ್ಚಿ ಈ ಹಳ್ಳಿಯ ಕೃಷಿ, ಜನರ ಆರೋಗ್ಯ, ಜೀವ ಉಳಿಸಬೇಕೆಂದು ಸರಕಾರಕ್ಕೆ ಆಗ್ರಹ ಮಾಡಿದರು.
ಗುರುವಾರ 175ನೇ ದಿನದ ಹೋರಾಟ ಬೆಂಬಲಿಸಲು ನಾಡಿನ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕುಂ. ವೀರಭದ್ರಪ್ಪ, ಆಳಂದ ವಿರಕ್ತ ಮಠದ ಕೋರಣೇಶ್ವರ ಸ್ವಾಮಿಗಳು, ಧಾರವಾಡ ನಿವಾಸಿ ಪರಿಸರ, ಮಹಿಳಾಪರ ಬರಹಗಾರರಾದ ಶಾರದಾ ಗೋಪಾಲ ಅವರು ಬಾಧಿತ ಹಿರೇಬಗನಾಳ, ಹಾಲವರ್ತಿ, ಕುಣಿಕೇರಿ ಮತ್ತು ತಾಂಡಾ ಜನರನ್ನು ಭೇಟಿ ಮಾಡಿ ಅವರ ಅಹವಾಲು ಆಲಿಸಿ ಬಂದು ವೇದಿಕೆಯಲ್ಲಿ ಮಾತನಾಡುವರು ಎಂದು ಜಂಟಿ ಕ್ರಿಯಾ ವೇದಿಕೆ ಪ್ರಕಟಣೆ ಮಾಡಿದೆ.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಎಸ್. ಪಾಟೀಲ್, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ.ಬಡಿಗೇರ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ರವಿ ಕಾಂತನವರ, ರಾಜಶೇಖರ ಏಳುಬಾವಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಶರಣು ಶೆಟ್ಟರ್, ಬಿ.ಜಿ. ಕರಿಗಾರ, ಮಂಜುನಾಥ ಮಾಲಿಪಾಟೀಲ್, ಯಮನೂರಪ್ಪ ಹಾಳಕೇರಿ, ರಮೇಶ ಡಂಬ್ರಳ್ಳಿ, ಬಸವರಾಜ ಪೂಜಾರ ಕಾಸನಕಂಡಿ, ಶಿವಕುಮಾರ ಹೊಸಳ್ಳಿ, ನಾಗರಾಜ ಕುಷ್ಟಗಿ, ಹನುಮಪ್ಪ ಹೊಸಳ್ಳಿ, ಆಟೋ ಮಂಜಪ್ಪ ಆಟೋ, ಸಂಗಮೇಶ್ವರ ಪಾಟೀಲ್, ಪಂಪಣ್ಣ ಹನುಮಪ್ಪ ಹೊಸಳ್ಳಿ, ದೇವರಾಜ ಹೊಸಳ್ಳಿ, ಬಸವರಾಜ ಹೊಸಳ್ಳಿ, ಶಾಂತಕುಮಾರ ಹೊಸಳ್ಳಿ, ಪಂಪಣ್ಣ ಚಿಂತಪಲ್ಲಿ, ಸುಂಕಮ್ಮ ಪಡಚಿಂತಿ, ಭೀಮಪ್ಪ ಯಲಬುರ್ಗಾ, ಮಹಾದೇವಪ್ಪ ಮಾವಿನಮಡು, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ರತ್ನಮ್ಮ ದೊಡ್ಡಮನಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್