
ಕೋಲಾರ, ೨೨ ಏಪ್ರಿಲ್ (ಹಿ.ಸ) :
ಆ್ಯಂಕರ್ : ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದ್ದು, ಹತಾಶೆಗೊಂಡಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಮಗ ಪ್ರಿಯಾಂಕ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಕುರಿತು ಮನಬಂದ0ತೆ ಮಾತನಾಡುತ್ತಿದ್ದು, ಮೊದಲು ಮಾನಸಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಿ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಸಲಹೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಈಗಾಗಲೇ ಕಾಂಗ್ರೆಸ್ ಪಾತಾಳ ತಲುಪಿದೆ. ಚಿತ್ತಾಪುರದಲ್ಲೂ ಈ ಬಾರಿ ಮರಿ ಖರ್ಗೆ ಗೆಲ್ಲುವುದಿಲ್ಲ ಎಂದು ವ್ಯಂಗ್ಯವಾಡಿರುವ ಅವರು, ವಿಶ್ವನಾಯಕರಾಗಿ ಗುರುತಿಸಿಕೊಂಡಿರುವ ಪ್ರಧಾನಿ ಮೋದಿಯವರನ್ನು ಉಗ್ರರಿಗೆ ಹೋಲಿಕೆ ಮಾಡುವ ಮೂಲಕ ತಮ್ಮ ಕೀಳುಮಟ್ಟದ ಸಂಸ್ಕೃತಿ ಪ್ರದರ್ಶಿಸಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡದೇ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡು ಮಾತನಾಡುತ್ತಿರುವುದು ಇಡೀ ಸಮುದಾಯದ ಗೌರವವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿರುವ ಅವರು, ಕೂಡಲೇ ಬಹಿರಂಗ ಕ್ಷಮೆಯಾಚಿಸಲು ಆಗ್ರಹಿಸಿದ್ದಾರೆ.
ಖರ್ಗೆಯವರನ್ನು ನಮ್ಮ ಸಮುದಾಯದ ನಾಯಕರು ಎಂದು ಹೇಳಿಕೊಳ್ಳಲು ನಾಚಿಕೆ ಪಡುವ ಪರಿಸ್ಥಿತಿಯನ್ನು ತಂದುಕೊAಡಿದ್ದಾರೆ, ಬಾಯಿಯ ಮೇಲೆ ಹಿಡಿತವೇ ಇಲ್ಲ, ಇವರು ಈ ದೇಶದ ಪ್ರಧಾನಿ, ಈ ದೇಶದ ಸಂಸ್ಕೃತಿಗೆ ಗೌರವ ನೀಡಬೇಕು ಎಂಬುದನ್ನೇ ಮರೆತುಬಿಟ್ಟಿದ್ದಾರೆ. ಇವರ ನಾಯಕರಾಗಿರುವ ರಾಹುಲ್ ಗಾಂಧಿ ಹೊರ ದೇಶಗಳಲ್ಲಿ ಹೋಗಿ ದೇಶದ ಘನತೆ ಹರಾಜು ಹಾಕಿ ಜನರ ನಗೆಪಾಟಿಲಿಗೆ ಒಳಗಾಗಿದ್ದಾರೆ.
ಉಗ್ರವಾದವನ್ನು ದಮನ ಮಾಡಿ ದೇಶದ ಸೈನಿಕರಿಗೆ ಆತ್ಮಸ್ಥೆöÊರ್ಯ ತುಂಬಿದವರು ನರೇಂದ್ರ ಮೋದಿಯವರು ಆದರೆ ಉಗ್ರರಿಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್, ಕುಕ್ಕರ್ ಬಾಂಬರ್ನನ್ನು ನಮ್ಮ ಸಹೋದರರು ಎಂದು ಬಹಿರಂಗವಾಗಿ ಹೇಳಿಕೊಂಡವರು ಕಾಂಗ್ರೆಸ್ಸಿಗರು ಇಂತಹವರ ಬಾಯಲ್ಲಿ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಕಾಂಗ್ರೆಸ್ ಸುಡುತ್ತಿರುವ ಮನೆ ಎಂದು ಹೇಳಿದ್ದರು ಎಂಬುದನ್ನು ಉಲ್ಲೇಖಿಸಿರುವ ಅವರು, ಖರ್ಗೆ ಕುಟುಂಬದಿAದ ದಲಿತರಿಗೆ ಏನು ಆಗಿಲ್ಲ, ಇವರು ದಲಿತರ ಹೆಸರು ಹೇಳಿಕೊಂಡು ಮೇಲೆ ಬಂದರು ಅಷ್ಟೆ ಎಂದಿದ್ದಾರೆ.
ರಾಜ್ಯದಲ್ಲಿ ತಮ್ಮದೇ ಕಾಂಗ್ರೆಸ್ ಸರ್ಕಾರ ದಲಿತರ ಎಸ್ಟಿಪಿಯ ೪೨ ಸಾವಿರ ಕೋಟಿ ಅನುದಾನ ದುರ್ಬಳಕೆ ಮಾಡಿಕೊಂಡಾಗ ಇವರು ತುಟಿ ಬಿಚ್ಚಲಿಲ್ಲ, ಜನಾಂಗಕ್ಕೆ ಆದ ವಂಚನೆ ಸರಿಪಡಿಸುವ ಪ್ರಯತ್ನವೂ ಮಾಡಲಿಲ್ಲ ಎಂದು ತಿಳಿಸಿದ್ದಾರೆ.
ದೇಶದ ಪ್ರಧಾನ ಮಂತ್ರಿಗೆ,ದೇಶಕ್ಕೆ ಗೌರವ ನೀಡಬೇಕೆಂಬ ಸಾಮಾನ್ಯ ಕಾಳಜಿಯೂ ಕಾಂಗ್ರೆಸ್ಸಿಗರಿಗಿಲ್ಲ ಎಂದು ಟೀಕಿಸಿರುವ ಅವರು, ಮಾತಿಗೆ ಮುಂಚೆ ಅಂಬೇಡ್ಕರ್,ಸAವಿಧಾನದ ಹೆಸರು ಹೇಳುತ್ತಿದ್ದು, ಇವರಿಗೆ ಯಾವುದೇ ನೈತಿಕತೆ ಇಲ್ಲ. ಅಂಬೇಡ್ಕರ್ರನ್ನು ಚುನಾವಣೆಯಲ್ಲಿ ಸೋಲಿಸಿದವರು ಈ ನಕಲಿ ಗಾಂಧಿಗಳು ನೇತೃತ್ವ ವಹಿಸಿರುವ ಕಾಂಗ್ರೆಸ್ ಪಕ್ಷ, ಅಂಬೇಡ್ಕರ್ ಅವರು ಸತ್ತಾಗ ದೆಹಲಿಯಲ್ಲಿ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ, ಮೃತದೇಹವನ್ನು ಪುಣೆಗೆ ಸಾಗಿಸಲು ಏರ್ ಅಂಬ್ಯುಲೆನ್ಸ್ಗೆ ನೆರವು ನೀಡಲಿಲ್ಲ, ಸತ್ತ ಮರುಕ್ಷಣವೇ ದೆಹಲಿಯ ಅಲಿಪುರದಲ್ಲಿನ ಅವರ ಮನೆಯಿಂದ ಅವರ ಪತ್ನಿಯನ್ನು ಹೊರ ಹಾಕಿ ಮನೆ ಖಾಲಿ ಮಾಡಿಸಿದರು ಇಂತಹ ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಅವರ ಹೆಸರೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ನಕಲಿ ಗಾಂಧಿಗಳ ಕುಟುಂಬಕ್ಕಾಗಿ ದೆಹಲಿಯಲ್ಲಿ ೧೩೫ ಎಕರೆ ಜಾಗ ಉಳಿಸಿಕೊಂಡವರಿಗೆ ಅಂಬೇಡ್ಕರ್ ಅವರ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡಲು ಮನಸ್ಸು ಬರಲಿಲ್ಲ ಇಂತಹವರಿ0ದ ನಿತ್ಯ ಅಂಬೇಡ್ಕರ್ ಜಪ ಕೇವಲ ಅಧಿಕಾರಕ್ಕಾಗಿ ಮಾತ್ರವೇ ಎಂದು ತಿಳಿಸಿದ್ದಾರೆ.
ಆದರೆ ಮೋದಿಯವರು ಅಂಬೇಡ್ಕರ್ ಹೆಸರಿನಲ್ಲಿ ಪಂಚ ತೀರ್ಥಗಳ ಅಭಿವೃದ್ದಿ, ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಿದರು ಎಂದ ಅವರು, ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡವರು ಈ ಕಾಂಗ್ರೆಸ್ ನಾಯಕರು ಎಂದು ವ್ಯಂಗ್ಯವಾಡಿದ ಅವರು ಸಂವಿಧಾನ ಕೊಟ್ಟ ಮಹಾತ್ಮ ಅಂಬೇಡ್ಕರ್ಗೆ ಭಾರತ ರತ್ನ ನೀಡಲು ಕಾಂಗ್ರೆಸ್ಸೇತರ ಸರ್ಕಾರವೇ ಬರಬೇಕಾಯಿತು ಎಂದು ಉದಾಹರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್