
ಕೋಲಾರ, ೨೨ ಏಪ್ರಿಲ್ (ಹಿ.ಸ) :
ಆ್ಯಂಕರ್ : ಕೆಜಿಎಫ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಮಾದ್ಯಮ ಮಿತ್ರರು ಕೋಲಾರ ಗಲ್ ಪೇಟೆಯಲ್ಲಿರುವ ಸಂಚಿಕೆ ಪತ್ರಿಕೆ ಕಚೇರಿಗೆ ಬೇಟಿ ನೀಡಿ ಸಿ.ಎಂ. ಮುನಿಯಪ್ಪ ನವರನ್ನು ಅಭಿನಂದಿಸಲಾಯಿತು.
ಸ0ಚಿಕೆ ದಿನ ಪತ್ರಿಕೆಯ ಸಂಪಾದಕರು, ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರು ಹಾಗೂ ಹೋರಾಟಗಾರರು ಆಗಿರುವ ಮುನಿಯಪ್ಪಣ್ಣನವರಿಗೆ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಿ ಗೌರವಿಸಿದೆ. ಈ ಹಿನ್ನಲೆಯಲ್ಲಿ ಮುನಿಯಪ್ಪನವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜೆ.ಜಿ ನಾಗರಾಜ್ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಸಿಎಂ ಮುನಿಯಪ್ಪ ರವರ ಬಗ್ಗೆ ಪ್ರಶಂಸನೀಯ ಮಾತುಗಳನ್ನು ಹೇಳಿದರು. ಅವರು ಪತ್ರಿಕಾ ರಂಗ ಮತ್ತು ದಲಿತಪರ ಚಳುವಳಿಗಳ ಹೋರಾಟ ಸೇರಿದಂತೆ ಜನಪರ ಹೋರಾಟ, ಸಂಘಟನೆಗಾಗಿ ಪ್ರಶಸ್ತಿ ಸಿಕ್ಕಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ ಎಂದು ಬಣ್ಣಿಸಿದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವಿ. ಮುನಿರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜೆ.ಜಿ.ಶ್ರೀನಿವಾಸಮೂರ್ತಿ, ಕೆಜಿಎಫ್ ತಾಲೂಕು ಮಾಜಿ ಅಧ್ಯಕ್ಷ ದೊರೈ ಅರಸು, ಮಾಜಿ ಖಜಾಂಚಿ ಮಲರ್ ಶೇಕರ್, ಹಾಲಿ ಉಪಾಧ್ಯಕ್ಷ ಸುದರ್ಶನ್, ಪಿ.ಎಲ್ ರಾಜ, ಕಾರ್ಯದರ್ಶಿ ಭರಣಿ, ಸದಸ್ಯರಾದ ಭಾಸ್ಕರ್, ವೆಂಕಟಪ್ಪ, ತಿರುಮಲೇಶ್, ಮಂಜುನಾಥ್, ಶ್ರೀಕಾಂತ್ ಮುನಿಯಪ್ಪನವರನ್ನು ಸನ್ಮಾನಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್