




ಬಳ್ಳಾರಿ, 21 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ಕೋಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಿಷನ್ಗೆ ಸೋಮವಾರ ಸಂಜೆ ಹಸ್ತಾಂತರ ಮಾಡಲಾಯಿತು.
ಬಳ್ಳಾರಿಯ ಹಿರಿಯರಾಗಿರುವ ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಮಾಜಿ ಸದಸ್ಯರಾಗಿರುವ ಕೆ.ಸಿ. ಕೊಂಡಯ್ಯ, ಶಾಸಕರಾದ ನಾರಾ ಭರತರೆಡ್ಡಿ, ಮಾಜಿ ಶಾಸಕರಾದ ಜಿ. ಸೋಮಶೇಖರರೆಡ್ಡಿ, ಮೇಯರ್ ಪಿ. ಗಾದೆಪ್ಪ, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀಧರ ಬೋನಗೇರಿ, ಪದಾಧಿಕಾರಿಗಳಾದ ಪೃಥ್ವಿರಾಜ್ ಭೂಪಾಲ್, ಸಿಎ ಸಿ. ಎರ್ರಿಸ್ವಾಮಿ ಅವರು ಭಕ್ತಾಧಿಗಳ ಸಮ್ಮುಖದಲ್ಲಿ ಕೋಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಿಷನ್ನ ಸಹ ಕಾರ್ಯದರ್ಶಿಗಳಾದ ಸತ್ಯೇಶನಂದಾಜೀ ಮಹಾರಾಜ್, ಬೆಂಗಳೂರಿನ ಶಿವನಹಳ್ಳಿಯ ಮಹಾವಾಕ್ಯನಂದಜೀ ಮಹಾರಾಜ್ ಮತ್ತು ಬಳ್ಳಾರಿಯ ಉಸ್ತುವಾರಿಗಳಾಗಿರುವ ಮಂಗಳನಾಥಾನಂದ ಜೀ ಮಹಾರಾಜ್ ಅವರು ದಾಖಲೆಗಳನ್ನು ಹಸ್ತಾಂತರ ಮಾಡಿದರು. ಆಗ, ದಾಖಲೆಗಳನ್ನು ಸ್ವೀಕರಿಸಿದ ಶ್ರೀಗಳು ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ರಾಮಕೃಷ್ಣ ಮಿಷನ್ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದರು.
ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ನಾರಾ ಭರತರೆಡ್ಡಿ, ಜಿ. ಸೋಮಶೇಖರರೆಡ್ಡಿ ಅವರು ಮಾತನಾಡಿ, ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ಕೋಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಿಷನ್ಗೆ ಹಸ್ತಾಂತರ ಮಾಡಲಾಗಿದ್ದು, ಬಳ್ಳಾರಿಯ ಆಶ್ರಮವು ರಾಷ್ಟ್ರೀಯ - ಅಂತಾರಾಷ್ಟ್ರೀಯಮಟ್ಟಕ್ಕೆ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಫೃಥ್ವಿರಾಜ್ ಭೂಪಾಲ್ ಅವರು ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರದಿಂದ ರಾಮಕೃಷ್ಣ ಮಿಷನ್ಗೆ ಸೇರ್ಪಡೆ ಆಗುವವರೆಗಿನ ಬೆಳವಣಿಗೆಗಳು ಮತ್ತು ದಾನಿಗಳ ಕುರಿತು ವರದಿ ವಾಚನ ಮಾಡಿದರು. ಸಿಎ ಸಿ. ಎರ್ರಿಸ್ವಾಮಿ ಅವರು ದಾನಿಗಳ ಕುರಿತು ಮಾಹಿತಿ ನೀಡಿದರು. ಶ್ರೀರಾಮಕೃಷ್ಣ ವಿವೇಕಾನಂದ ಸೆಂಟರ್ನ ಕಾರ್ಯದರ್ಶಿ ಜಗನ್ನಾಥ್ ಅವರು ಸ್ವಾಗತಿಸಿದರು. ಶಿಕ್ಷಕ ರಾಜಶೇಖರ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಗಡಿಗೆ ರಾಕೇಶ್ ಅವರು ವಂದನಾರ್ಪಣೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್