ಮಹತ್ವದ ಮೈಲಿಗಲ್ಲು ಸಾಧಿಸಿದ ಬಿಡಬ್ಲ್ಯೂಎಸ್ಎಸ್ಬಿ
ಬೆಂಗಳೂರು, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರತಿಷ್ಠಿತ ISO 50001:2018 ಇಂಧನ ನಿರ್ವಹಣಾ ಮಾನದಂಡ ಪ್ರಮಾಣೀಕರಣವನ್ನು ಪಡೆದಿರುವ ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹಾಗೂ ಇಡೀ ತಂಡಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಇಂದು
Bwssb


ಬೆಂಗಳೂರು, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರತಿಷ್ಠಿತ ISO 50001:2018 ಇಂಧನ ನಿರ್ವಹಣಾ ಮಾನದಂಡ ಪ್ರಮಾಣೀಕರಣವನ್ನು ಪಡೆದಿರುವ ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹಾಗೂ ಇಡೀ ತಂಡಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಇಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಇದು ಬೆಂಗಳೂರಿಗೆ ಹೆಮ್ಮೆಯ ಕ್ಷಣವಾಗಿದೆ” ಎಂದು ಹೇಳಿದರು.

ISO 50001:2018 ಪ್ರಮಾಣೀಕರಣವನ್ನು ಪಡೆದ ಭಾರತದ ಮೊದಲ ಜಲ ಉಪಯುಕ್ತತೆಯಾಗಿ ಬಿಡಬ್ಲ್ಯೂಎಸ್ಎಸ್ಬಿ ಹೊರಹೊಮ್ಮಿದೆ. ಈ ಸಾಧನೆ ಬಿಡಬ್ಲ್ಯೂಎಸ್ಎಸ್ಬಿ ದಕ್ಷ ಇಂಧನ ಬಳಕೆ ಹಾಗೂ ಬೃಹತ್ ನೀರು ಸರಬರಾಜು ಪಂಪಿಂಗ್ ವ್ಯವಸ್ಥೆಗಳ ಉತ್ತಮ ನಿರ್ವಹಣೆಗೆ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಈ ಮಾನ್ಯತೆ ರಾಷ್ಟ್ರೀಯ ಮಟ್ಟದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವುದರ ಜೊತೆಗೆ, ಸುಸ್ಥಿರ ಮತ್ತು ಭವಿಷ್ಯಮುಖಿ ಬೆಂಗಳೂರನ್ನು ನಿರ್ಮಿಸುವ ಸರ್ಕಾರದ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande