
ನವದೆಹಲಿ, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಏಪ್ರಿಲ್ 22ರಂದು ಭಾಲ್ಕಿಯಲ್ಲಿ ನಡೆಯಲಿರುವ ಲಿಂ. ಡಾ. ಚನ್ನಬಸವ ಪಟ್ಟದೇವರ ಪುಣ್ಯಸ್ಮರಣೆ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ದೇಶದ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರಿಗೆ ಆಹ್ವಾನ ನೀಡಲಾಯಿತು.
ಕಾರ್ಯಕ್ರಮದ ಆಯೋಜಕರು ಉಪರಾಷ್ಟ್ರಪತಿಯನ್ನು ಭೇಟಿ ಮಾಡಿ, ಭಾಲ್ಕಿಯಲ್ಲಿ ನಡೆಯಲಿರುವ ಈ ಧಾರ್ಮಿಕ-ಸಾಂಸ್ಕೃತಿಕ ಸಮಾರಂಭದಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಈ ಮಹೋತ್ಸವದಲ್ಲಿ ಭಕ್ತರು, ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಸಂಸದ ಸಾಗರ ಖಂಡ್ರೆ, ಗುರುಬಸವ ಪಟ್ಟದೇವರು ಹಾಗೂ ಶಶಿಧರ್ ಕೋಸಂಬೆ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa