ರಾಜ್ ಕುಮಾರ್ ಪುಣ್ಯಸ್ಮರಣೆ ; ಸಿದ್ದರಾಮಯ್ಯ ನಮನ
ರಾಜ್ಕುಮಾರ್
Cm


ಬೆಂಗಳೂರು, 12 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕನ್ನಡ ಮತ್ತು ಕನ್ನಡಿಗರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಡಾ. ರಾಜ್‌ ಕುಮಾರ್ ಅವರ ಪುಣ್ಯಸ್ಮರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾವನಾತ್ಮಕವಾಗಿ ನಮನ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಸಿದ್ದರಾಮಯ್ಯ, ರಾಜ್‌ ಕುಮಾರ್ ಅವರು ನೆಲ, ಜಲ ಮತ್ತು ಭಾಷೆ ಸಂಬಂಧಿತ ವಿಚಾರಗಳಲ್ಲಿ ಅನ್ಯಾಯವಾದಾಗಲೆಲ್ಲ ಅದಕ್ಕೆ ವಿರುದ್ಧವಾಗಿ ಧೈರ್ಯವಾಗಿ ಧ್ವನಿ ಎತ್ತಿ, ಹೋರಾಟದ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದ ಅಪ್ಪಟ ಕನ್ನಡಿಗರಾಗಿದ್ದರು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಹಲವು ದಶಕಗಳಿಂದ ರಾಜ್‌ ಕುಮಾರ್ ಹಾಗೂ ಅವರ ಕುಟುಂಬದೊಂದಿಗೆ ತನ್ನ ಒಡನಾಟವಿದ್ದು, ಪ್ರತೀ ಬಾರಿ ಭೇಟಿಯಾದಾಗ “ಓಹೋಹೊ ನಮ್ಮ ಕಾಡಿನವರು” ಎಂದು ಆತ್ಮೀಯವಾಗಿ ಅಪ್ಪಿಕೊಳ್ಳುತ್ತಿದ್ದ ರಾಜಣ್ಣನ ಮಮತೆ ಮತ್ತು ಅಕ್ಕರೆ ಮರೆಯಲಾಗದು ಎಂದು ಅವರು ಸ್ಮರಿಸಿದ್ದಾರೆ.

ನಟನಾಗಿ, ಗಾಯಕನಾಗಿ ಹಾಗೂ ಕನ್ನಡದ ಕಟ್ಟಾಳುವಾಗಿ ರಾಜ್ಕುಮಾರ್ ಅವರು ಕನ್ನಡಿಗರ ಹೃದಯದಲ್ಲಿ ಸದಾ ಅಮರರಾಗಿದ್ದಾರೆ. ಅವರ ಸೇವೆ, ವ್ಯಕ್ತಿತ್ವ ಮತ್ತು ಭಾಷಾಭಿಮಾನ ಸದಾ ಪ್ರೇರಣೆಯಾಗಲಿದೆ ಎಂದು ತಿಳಿಸಿದ್ದಾರೆ.

ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸಿರುವ ಸಿದ್ದರಾಮಯ್ಯ, ರಾಜ್‌ ಕುಮಾರ್ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ದೀಪಸ್ತಂಭವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande