ಕೊಲ್ಲಿ ಕದನ ; ಗ್ಯಾಸ್ ಸಿಗದೆ ಆಟೋ ಚಾಲಕರ ಗೋಳಾಟ
ಗದಗ, 12 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಗದಗ ಜಿಲ್ಲೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಎಲ್ ಪಿ ಜಿ ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ಜೀವನ ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ. ಗದಗ-ಬೆಟಗೇರಿ ಅವಳಿ ನಗರದ ನಾಲ್ಕು ಎಲ್ ಪಿ ಜಿ ಬಂಕ್ಗಳ
ಫೋಟೋ


ಗದಗ, 12 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಗದಗ ಜಿಲ್ಲೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಎಲ್ ಪಿ ಜಿ ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ಜೀವನ ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ.

ಗದಗ-ಬೆಟಗೇರಿ ಅವಳಿ ನಗರದ ನಾಲ್ಕು ಎಲ್ ಪಿ ಜಿ ಬಂಕ್ಗಳ ಪೈಕಿ ಎರಡು ಬಂಕ್ಗಳು ಬಂದ್ ಆಗಿದ್ದು, ಉಳಿದ ಬಂಕ್ಗಳಲ್ಲಿ ಸಹ ಸಮರ್ಪಕವಾಗಿ ಗ್ಯಾಸ್ ಲಭ್ಯವಾಗುತ್ತಿಲ್ಲ. ಇದರಿಂದ ಆಟೋ ಚಾಲಕರು ದಿನನಿತ್ಯ ಗ್ಯಾಸ್ಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಎಪಿಎಂಸಿ ಬಳಿ ಇರುವ ಗ್ಯಾಸ್ ಬಂಕ್ನಲ್ಲಿ “ಗ್ಯಾಸ್ ಇಲ್ಲ” ಫಲಕ ಅಳವಡಿಸಿರುವುದು ಸಾಮಾನ್ಯ ದೃಶ್ಯವಾಗಿದ್ದು, ಚಾಲಕರಲ್ಲಿ ಅಸಮಾಧಾನ ಹೆಚ್ಚಿಸಿದೆ. ಇನ್ನೊಂದೆಡೆ, ಲಭ್ಯವಿರುವ ಬಂಕ್ಗಳಲ್ಲಿ ಒಂದೊಂದು ದರ ವಿಧಿಸಲಾಗುತ್ತಿದ್ದು, “ಒಂದೊಂದು ಬಂಕ್ ಒಂದೊಂದು ದರ” ಎಂಬ ಆರೋಪ ಕೇಳಿಬರುತ್ತಿದೆ.

ಗ್ಯಾಸ್ ಬೆಲೆ ಏರಿಕೆಯಿಂದ ಆಟೋ ಚಾಲಕರಿಗೆ ಆರ್ಥಿಕ ಹೊರೆ ಹೆಚ್ಚಾಗಿದ್ದು, ಪ್ರಯಾಣಿಕರು ಹೆಚ್ಚುವರಿ ದರ ನೀಡಲು ಸಮ್ಮತಿಸದೇ ಇರುವುದರಿಂದ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ದಿನನಿತ್ಯದ ಜೀವನ ನಿರ್ವಹಣೆ i ಕಷ್ಟಕರವಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

“ಗ್ಯಾಸ್ ಇಲ್ಲದೆ ವಾಹನ ಓಡಿಸಲು ಆಗುತ್ತಿಲ್ಲ, ಇದ್ದರೂ ದುಬಾರಿ ದರಕ್ಕೆ ತೆಗೆದುಕೊಳ್ಳಬೇಕು. ಆದರೆ ಪ್ರಯಾಣಿಕರು ಹೆಚ್ಚುವರಿ ಹಣ ನೀಡಲು ಸಿದ್ಧರಿಲ್ಲ. ಹೀಗಾಗಿ ದಿನಸಿ ಖರ್ಚು ಕೂಡ ನಡೆಸುವುದು ಕಷ್ಟವಾಗಿದೆ,” ಎಂದು ಆಟೋ ಚಾಲಕರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಆಟೋ ಚಾಲಕರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಉಪ ಚುನಾವಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದವರು ಈಗಾಗಲೇ ಅವು ಮುಗಿದಿದ್ದರೂ, ಈ ಸಮಸ್ಯೆಯತ್ತ ಗಮನ ಹರಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ತಕ್ಷಣ ಮಧ್ಯಪ್ರವೇಶ ಮಾಡಿ, ಎಲ್ ಪಿ ಜಿ ಗ್ಯಾಸ್ ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಬೇಕು. ಬೇಕಾಬಿಟ್ಟಿ ದರ ಏರಿಕೆ ಮಾಡುವ ಬಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕ ಸಂಘದ ಮುಖಂಡ ಸಂತೋಷ ಅವರು ಆಗ್ರಹಿಸಿದ್ದಾರೆ.

ಒಟ್ಟಾರೆ, ಎಲ್ ಪಿ ಜಿ ಗ್ಯಾಸ್ ಕೊರತೆ ಮತ್ತು ಬೆಲೆ ಏರಿಕೆಯ ದ್ವಂದ್ವ ಸಮಸ್ಯೆಯಿಂದ ಗದಗದ ಆಟೋ ಚಾಲಕರು ಸಂಕಷ್ಟದಲ್ಲಿ ಸಿಲುಕಿದ್ದು, ಸರ್ಕಾರದಿಂದ ತ್ವರಿತ ಪರಿಹಾರ ಕ್ರಮಗಳನ್ನು ನಿರೀಕ್ಷಿಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande