ಡಾ. ಬಾಬು ಜಗಜೀವನ ರಾಮ್ ಪುತ್ಥಳಿ ಸ್ಥಾಪನೆಗೆ ಆಗ್ರಹ
ಗದಗ, 12 ಏಪ್ರಿಲ್ (ಹಿ.ಸ.) : ಆ್ಯಂಕರ್ : ಹಸಿರು ಕ್ರಾಂತಿಯ ಹರಿಕಾರರಾದ ಡಾ. ಬಾಬು ಜಗಜೀವನ ರಾಮ್ ಅವರ 120ನೇ ಜಯಂತಿ ಅಂಗವಾಗಿ ಗದಗ ನಗರದಲ್ಲಿ ಅವರ ಹೆಸರಿನಲ್ಲಿ ಪ್ರಮುಖ ವೃತ್ತದಲ್ಲಿ ಪುತ್ಥಳಿ ಸ್ಥಾಪಿಸಿ, ಆ ವೃತ್ತಕ್ಕೆ ನಾಮಕರಣ ಮಾಡುವಂತೆ ಗದಗ ಜಿಲ್ಲಾ ಮಾದಿಗರ ಸಮಾನತೆ ಸಮಿತಿ ಮನವಿ ಸಲ್ಲಿಸಿದೆ. ನ
ಫೋಟೋ


ಗದಗ, 12 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಹಸಿರು ಕ್ರಾಂತಿಯ ಹರಿಕಾರರಾದ ಡಾ. ಬಾಬು ಜಗಜೀವನ ರಾಮ್ ಅವರ 120ನೇ ಜಯಂತಿ ಅಂಗವಾಗಿ ಗದಗ ನಗರದಲ್ಲಿ ಅವರ ಹೆಸರಿನಲ್ಲಿ ಪ್ರಮುಖ ವೃತ್ತದಲ್ಲಿ ಪುತ್ಥಳಿ ಸ್ಥಾಪಿಸಿ, ಆ ವೃತ್ತಕ್ಕೆ ನಾಮಕರಣ ಮಾಡುವಂತೆ ಗದಗ ಜಿಲ್ಲಾ ಮಾದಿಗರ ಸಮಾನತೆ ಸಮಿತಿ ಮನವಿ ಸಲ್ಲಿಸಿದೆ.

ನಗರದ ಪ್ರಮುಖ ಸ್ಥಳದಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ ಪುತ್ಥಳಿ ಸ್ಥಾಪನೆಯಿಂದ ಯುವಪೀಳಿಗೆಗೆ ಅವರ ಆದರ್ಶಗಳು ಪರಿಚಯವಾಗಲಿವೆ. ಸಮಾಜದ ಹಿಂದುಳಿದ ವರ್ಗಗಳ ಉತ್ತೇಜನಕ್ಕಾಗಿ ಅವರು ಮಾಡಿದ ಸೇವೆ ಸ್ಮರಣೀಯವಾಗಿದ್ದು, ಅವರ ಸ್ಮರಣಾರ್ಥವಾಗಿ ಶಾಶ್ವತ ಗುರುತು ನಿರ್ಮಾಣ ಅಗತ್ಯವಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಈ ಸಂಬಂಧ ನಗರಸಭೆ ಪೌರಾಯುಕ್ತರಿಗೆ ಶಿಫಾರಸು ಮಾಡುವಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಹೆಚ್. ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಅವರು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಯುವರಾಜ ಬಳ್ಳಾರಿ, ಪೃಥ್ವಿ ಪರಾಪುರ, ಗೋವಿಂದರಾಜ ಬಳ್ಳಾರಿ, ವಾಸು ಹುನಗುಂದ, ಬಸವರಾಜ ಕಡೆಮನಿ, ಬಾಲರಾಜ ಅರಬರ, ಕೆಂಚಪ್ಪ ಪೂಜಾರ, ಹೊನ್ನಪ್ಪ ಸಾಕಿ, ಜೋಗಣ್ಣವರ ಹಾಗೂ ಪ್ರಚಾರ ಡಿ.ಜಿ. ಸಮಿತಿ ಜಿಲ್ಲಾ ಅಧ್ಯಕ್ಷ ಅಶೋಕ ಮಂದಾಲಿ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ಸ್ಥಳೀಯವಾಗಿ ಡಾ. ಬಾಬು ಜಗಜೀವನ ರಾಮ್ ಅವರ ಹೆಸರಿನಲ್ಲಿ ವೃತ್ತ ನಿರ್ಮಾಣವಾಗುವುದರಿಂದ ಅವರ ಕೊಡುಗೆಗಳು ಇನ್ನಷ್ಟು ಜನರಿಗೆ ತಲುಪಲಿವೆ ಎಂದು ಸಂಘಟನೆಯ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande