
ಗದಗ, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಆರಡಿ ಮಲ್ಲಯ್ಯ ಪಿ. ಅವರಿಗೆ ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ. ‘ಆದಿಮ ಸಮುದಾಯಗಳ ಕುಲಚಿಹ್ನೆಗಳು ಮತ್ತು ವಿಧಿನಿಷೇಧಗಳು (ಮಧ್ಯ ಕರ್ನಾಟಕವನ್ನು ಅನುಲಕ್ಷಿಸಿ)’ ಎಂಬ ವಿಷಯದಲ್ಲಿ ಅವರು ಮಂಡಿಸಿದ ಪ್ರಬಂಧಕ್ಕೆ ಈ ಪದವಿ ಲಭಿಸಿದೆ.
ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಮಾನ್ಯತಾ ಕೇಂದ್ರವಾದ ಡಾ. ಎಂ. ಎಂ. ಕಲಬುರ್ಗಿ ಸಂಶೋಧನ ಕೇಂದ್ರದ ಮಾರ್ಗದರ್ಶಕರಾದ ಡಾ. ಎಂ. ಮಂಜಣ್ಣ ಅವರು ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಠದ ಆಡಳಿತಾಧಿಕಾರಿ ಎಸ್. ಎಸ್. ಪಟ್ಟಣಶೆಟ್ಟಿ, ಸಂಯೋಜನಾಧಿಕಾರಿ ಡಾ. ಅರ್ಜುನ ಗೊಳಸಂಗಿ ಹಾಗೂ ಕಾರ್ಯದರ್ಶಿ ಶಿವನಗೌಡ ಗೌಡರ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP