ನಾಳೆ ತೋಂಟದಾರ್ಯ ಮಠದಲ್ಲಿ 2793 ನೇ ಶಿವಾನುಭವ
ಗದಗ, 12 ಏಪ್ರಿಲ್ (ಹಿ.ಸ.) : ಆ್ಯಂಕರ್ : ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಇಂದು 13-04-2026 ರಂದು ಸೋಮವಾರ ಸಾಯಂಕಾಲ 7-00ಕ್ಕೆ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ 2793 ನೆಯ ಶಿವಾನುಭವ ಜರುಗಲಿದ್ದು, ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ
ಫೋಟೋ


ಗದಗ, 12 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಇಂದು 13-04-2026 ರಂದು ಸೋಮವಾರ ಸಾಯಂಕಾಲ 7-00ಕ್ಕೆ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ 2793 ನೆಯ ಶಿವಾನುಭವ ಜರುಗಲಿದ್ದು, ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಪ್ರೊ. ಕೆ. ಎಚ್. ಬೇಲೂರ ನಿವೃತ್ತ ಪ್ರಾಧ್ಯಾಪಕರು ಮತ್ತು ಸಂಸ್ಕೃತಿ ಚಿಂತಕರು ಗದಗ ಅವರಿಗೆ ಸಂಮಾನ ಜರುಗಲಿದೆ. ‘ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಬದುಕು-ಸಾಧನೆ’ ವಿಷಯ ಕುರಿತು ಡಾ. ಅನುಷಾ ಎಚ್.ಸಿ. ಕನ್ನಡ ಸಹಾಯಕ ಪ್ರಾಧ್ಯಾಪಕರು, ಶ್ರೀ ಫಕೀರೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶಿರಹಟ್ಟಿ ಅವರು ಉಪನ್ಯಾಸ ನೀಡಲಿದ್ದಾರೆ. ಶಿವಾನುಭವದಲ್ಲಿ 2026-26 ನೇ ಸಾಲಿನಲ್ಲಿ ಪಿ.ಯು.ಸಿ. ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಲಾವಿಭಾಗದಲ್ಲಿ ಹುಲಿಗೆಮ್ಮ (98.16%), ವಿಜ್ಞಾನ ವಿಭಾಗದಲ್ಲಿ ಸಮೃದ್ಧಿ ಶಿದ್ಲಿಂಗ (98.5%), ವಾಣಿಜ್ಯ ವಿಭಾಗದಲ್ಲಿ ಪದ್ಮಪ್ರಿಯಾ ಶೆಟ್ಟರ (98.33%), ಗೀತಾ ಹೂಗಾರ (98.33%) ಈ ವಿದ್ಯಾರ್ಥಿಗಳಿಗೆ ಸನ್ಮಾನ ಜರುಗಲಿದೆ. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಸಂಗಡಿಗರಿಂದ ವಚನಸಂಗೀತ ಕಾರ್ಯಕ್ರಮ ಜರುಗಲಿದೆ.

ಧರ್ಮಗ್ರಂಥ ಪಠಣವನ್ನು ಭಾಗ್ಯಶ್ರೀ ಪತ್ತಾರ, ವಚನ ಚಿಂತನೆಯನ್ನು ಕಾವೇರಿ ಬಡಿಗೇರ ಇವರು ಮಾಡುವರು.

ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ಶ್ರೀಮತಿ ಸುಜಾತಾ ಯಶೋಧರ ಪತ್ತಾರ ಗದಗ ಇವರು ವಹಿಸಿಕೊಂಡಿದ್ದಾರೆಂದು ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande