
ಧಾರವಾಡ, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮುಂಗಾರು ಹಂಗಾಮಿನಲ್ಲಿ ಅರ್ಹ ರೈತರಿಗೆ ಸಕಾಲದಲ್ಲಿ ಯೂರಿಯಾ ಗೊಬ್ಬರ ಪೂರೈಸಬೇಕಾಗಿರುತ್ತದೆ. ಅಲ್ಲದೇ ಈಗಾಗಲೇ ಆಧಾರ ಸಂಖ್ಯೆ ಆಧಾರಿತ ರಸಗೊಬ್ಬರ ವಿತರಣೆ ವ್ಯವಸ್ಥೆಯ ಚಾಲ್ತಿಯಲ್ಲಿದ್ದು, ಜೊತೆಗೆ ರೈತರ ಜಮೀನಿನ ವಿಸ್ತೀರ್ಣ ಹಾಗೂ ಬೆಳೆಯ ಆಧಾರದ ಮೇಲೆ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ಇದರಿಂದಾಗಿ ಕೃಷಿ ಹೊರತಾಗಿ ಇತರೆ ಉದ್ದೇಶಕ್ಕೆ ರಸಗೊಬ್ಬರ ಬಳಸುವುದಕ್ಕೆ ಕಡಿವಾಣ ಹಾಕಲಾಗುತ್ತದೆ.
ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ 2,42,729 ನಷ್ಟು ರೈತರು ತಮ್ಮ ಫ್ರೂಟ್ಸ್ ಐಡಿಗಳನ್ನು ನೊಂದಣಿ ಮಾಡಿಕೊಂಡಿದ್ದು, ಇಲಾಖೆಯ ಸೌಲಭ್ಯಗಳಾದ ಬಿತ್ತನೆ ಬೀಜ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ, ಕೃಷಿ ಪರಿಕರಗಳು, ಕೃಷಿ ಯಂತ್ರೋಪಕರಣಗಳನ್ನು ಪಡೆಯುತ್ತಿದ್ದಾರೆ.
ಅದೇ ರೀತಿ ಈಗ ರಸಗೊಬ್ಬರ ಖರೀದಿಗೂ ಕೂಡಾ ಫ್ರೂಟ್ಸ್ ಐಡಿ ಅವಶ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ತಂತ್ರಾಂಶದಲ್ಲಿ ಕಡ್ಡಾಯವಾಗಿ ಫ್ರೂಟ್ಸ್ ಐಡಿ ವಿವರ ದಾಖಲಿಸಿ ರಸಗೊಬ್ಬರ ಖರೀದಿ ಮಾಡಬೇಕೆಂಬ ನಿಯಮ ರೂಪಿಸಲಾಗಿದೆ. ಆದ್ದರಿಂದ ಇನ್ನು ಮುಂದೆ ರಸಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಅವಶ್ಯವಿದ್ದು, ಜಿಲ್ಲೆಯ ಎಲ್ಲಾ ರೈತರು ತಮ್ಮ ಸರ್ವೆ ನಂಬರಗಳನ್ನು ಫ್ರೂಟ್ಸ್ ಐಡಿಗೆ ಸೇರಿಸಿಕೊಳ್ಳುವುದು. ಮತ್ತು ಫ್ರೂಟ್ಸ್ ಐಡಿ ನೊಂದಣಿ ಮಾಡಿಕೊಳ್ಳದ ರೈತರು ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ಮತ್ತು ಉತಾರ ಪ್ರತಿಯನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಫ್ರೂಟ್ಸ್ ಐಡಿಗೆ ನೊಂದಣಿ ಮಾಡಿಕೊಳ್ಳಬೇಕು.
ಸಬ್ಸಿಡಿ ದರದಲ್ಲಿ ದೊರೆಯುವ ಯೂರಿಯಾ ದುರ್ಬಳಕೆ ಆಗಬಾರದು. ಮತ್ತು ಯೂರಿಯಾ ಅನಾವಶ್ಯಕ ಬಳಕೆಯನ್ನು ತಡೆಗಟ್ಟಲು ಸರ್ಕಾರ ಹೊಸ ವ್ಯವಸ್ಥೆ ಜಾರಿ ತಂದಿದೆ. ಇದನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುμÁ್ಠನಗೊಳಿಸಲಾಗುವುದು. ಆದ್ದರಿಂದ ಎಲ್ಲ ರೈತ ಭಾಂದವರು ಸಹಕರಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa