ದುರ್ಗಾದೇವಿ ಶಿಕ್ಷಣ ಸಮಿತಿಗೆ ಪ್ರಶಾಂತಿ ಟ್ರಸ್ಟ್ ಭೇಟಿ
ಗದಗ, 11 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗದಗ ನಗರದ ಗಂಗಾಪುರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಗೆ ಚಿಕ್ಕಬಳ್ಳಾಪೂರ ಜಿಲ್ಲೆಯ ಮುದ್ದೇನಹಳ್ಳಿ ಪ್ರಶಾಂತಿ ಟ್ರಸ್ಟ್ನ ಟ್ರಸ್ಟಿಗಳು ಭೇಟಿ ನೀಡಿ, ಬಾಲಮಂದಿರದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟಿ ಎ
ಫೋಟೋ


ಗದಗ, 11 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ ನಗರದ ಗಂಗಾಪುರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಗೆ ಚಿಕ್ಕಬಳ್ಳಾಪೂರ ಜಿಲ್ಲೆಯ ಮುದ್ದೇನಹಳ್ಳಿ ಪ್ರಶಾಂತಿ ಟ್ರಸ್ಟ್ನ ಟ್ರಸ್ಟಿಗಳು ಭೇಟಿ ನೀಡಿ, ಬಾಲಮಂದಿರದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.

ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟಿ ಎಂ.ಎಸ್. ಸತ್ಯನಾರಾಯಣ ಅವರು, ಭಾರತ ಸಂಸ್ಕೃತಿ ಉಳಿಯಬೇಕಾದರೆ ಬಡತನ ಹಾಗೂ ರೋಗಗಳನ್ನು ನಿವಾರಿಸುವುದು ಅತ್ಯಾವಶ್ಯಕವಾಗಿದ್ದು, ಅದಕ್ಕೆ ಮೌಲ್ಯಯುತ ಶಿಕ್ಷಣವೇ ಮೂಲಾಧಾರವಾಗಿದೆ ಎಂದು ಹೇಳಿದರು.

ಮಕ್ಕಳಿಗೆ ಬಾಲ್ಯದಲ್ಲೇ ಮೌಲ್ಯಾಧಾರಿತ ಶಿಕ್ಷಣ ನೀಡಿದರೆ, ಅವರು ಬೆಳೆದಂತೆ ಅದರ ಮಹತ್ವವನ್ನು ಅರಿತು ಸಮಾಜ ಸೇವೆಯ ದಾರಿಯಲ್ಲಿ ಮುಂದುವರಿಯುತ್ತಾರೆ. ಇಂತಹ ಉತ್ತಮ ವ್ಯಕ್ತಿತ್ವಗಳು ಈ ಶಾಲೆಯಿಂದ ಹೊರಹೊಮ್ಮಲಿ ಎಂದು ಆಶಿಸಿದರು. ಶಿಕ್ಷಕರ ಸೇವೆ ಈ ದಿಕ್ಕಿನಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಪುಟ್ಟಪರ್ತಿಯ ಸತ್ಯಸಾಯಿ ಭಗವಾನ್ ಬಾಬಾ ಅವರ ನಂತರ ಸದ್ಗುರು ಡಾ. ಮಧುಸೂದನ್ ಸಾಯಿ ಅವರ ನೇತೃತ್ವದಲ್ಲಿ “ಒಂದು ಜಗತ್ತು - ಒಂದು ಕುಟುಂಬ” ಎಂಬ ಧ್ಯೇಯದೊಂದಿಗೆ ಮುದ್ದೇನಹಳ್ಳಿ ಸೇರಿದಂತೆ ದೇಶ-ವಿದೇಶಗಳಲ್ಲಿ ಉಚಿತ ಪೌಷ್ಠಿಕತೆ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ನಡೆಯುತ್ತಿವೆ ಎಂದು ವಿವರಿಸಿದರು.

ರಾಜ್ಯದ ಸರ್ಕಾರಿ ಶಾಲೆಗಳ ಲಕ್ಷಾಂತರ ಮಕ್ಕಳಿಗೆ ಪೌಷ್ಠಿಕಾಹಾರ ಯೋಜನೆಯಡಿ ಹಾಲಿನೊಂದಿಗೆ ಪೌಡರ್ ವಿತರಣೆ, ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ವಸತಿಯೊಂದಿಗೆ ಶಿಕ್ಷಣ ಹಾಗೂ ಲಕ್ಷಾಂತರ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಸೇವೆಗಳಲ್ಲಿ ಎಲ್ಲಿಯೂ ಶುಲ್ಕ ವಸೂಲಾತಿ ಇಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕಿನ ಮಜೂರಿನ ಶ್ರೀ ಸತ್ಯಸಾಯಿ ವಾಣಿ ನಿಕೇತನ ಗುರುಕುಲದ ಚೇರ್ಮನ್ ಬಿ.ಎಸ್. ಗೋಣಿ, ಕಾರ್ಯಾಧ್ಯಕ್ಷೆ ಡಾ. ಸೀಮಾ, ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಪ್ರೊ. ರಾಮಚಂದ್ರ ಜೋಗಿನ, ದುರ್ಗಾದೇವಿ ಶಿಕ್ಷಣ ಸಮಿತಿಯ ಅಧ್ಯಕ್ಷ ವೆಂಕಟೇಶ ಇಮರಾಪೂರ, ಉಪಾಧ್ಯಕ್ಷೆ ಮಲ್ಲಮ್ಮ ಕೊಪ್ಪದ, ಕಾರ್ಯದರ್ಶಿ ಕವಿತಾ ಇಮರಾಪೂರ, ನಿರ್ದೇಶಕರು ಮೋಹನ ಇಮರಾಪೂರ, ಮುತ್ತು ಜಡಿ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande