
ಗದಗ, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪೌಷ್ಟಿಕಾಂಶ ಆಹಾರ ಔಷದೋಪಚಾರ ರಿಂದ ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು ಆದ್ದರಿಂದ ಇಂದು ಭಾರತ ಟಿಬಿ 2030ರ ಒಳಗಾಗಿ ಮುಕ್ತಭಾರತವ್ವು ಮಾಡುವ ಹುದ್ದೇಶದಿಂದ ಪ್ರತಿಯೊಂದು ಗ್ರಾಮದಲ್ಲಿ ಕಫ ಮತ್ತು ಎಕ್ಸರೆ ಎದೆ ಪರೀಕ್ಷೆ ಮಾಡುವ ಮೂಲಕ ರೋಗವನ್ನು ಕಂಡು ಹಿಡಿದು ತ್ವರಿಯವಾಗಿ ಓಷದೋಪಚಾರವನ್ನು ಮಾಡಿ ಕ್ಷಯ ಮುಕ್ತ ಮಾಡಲಾಗುವುದು ಆದ್ದರಿಂದ ಕ್ಷಯರೋಗದ ಲಕ್ಷಣ ಮತ್ತು ಸಕ್ಕರೆ ಖಾಯಿಲೆ ಇರುವಂತವರು ಕಫ ಮತ್ತು ಎಕ್ಸರೆ ಎದೆ ಪರೀಕ್ಷೆ ಮಡಿಸಿಕೊಳ್ಳಬೇಕೆಂದು ಸಿಎಸ್.ಐ ಜರ್ಮನ್ ಆಸ್ಪತ್ರೆಯ ವೈದ್ಯಾರಾದ ಡಾ.ಹರೀಶ ರವರು ಕರೆ ನೀಡಿದರು
ರಾಜ್ಯ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗದಗ ತಾಲೂಕಿನ ಲಕ್ಕುಂಡಿ ಅಡವಿಸೋಮಾಪೂರ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಏರ್ಪಟಿಸಲಾಗಿದ್ದ ಕ್ಷಯರೋಗ ಅರಿವು ಮತ್ತು ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿದರು
ಪ್ರಪ್ರಥಮವಾಗಿ ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದಲ್ಲಿ ಎಕ್ಷರೆ ಮತ್ತು ಕಫ ಪರೀಕ್ಷೆಯನ್ನು ಇದು ಸಾರ್ವಜನಿಕರಿಗೆ ವರದಾನವಾಗಿದೆ ಏಕೆಂದರೆ ಗದಗಗೆ ಹೋಗಿ ದಿನಗಟ್ಟ್ಲೆ ಕಾದು ಎಕ್ಷರೆ ಮಾಡಿಸಿಕೊಳ್ಳುವುದು ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು ಸರ್ಕಾರವು ತಮ್ಮ ಮನೆ ಬಾಗಿಲಿಗೆ ಕ್ಷಯ ಮುಕ್ತಗ್ರಾಮವನ್ನು ಮಾಡಲು ಸೇವೆಯನ್ನು ಆರಂಬಿಸಿದ್ದು ಸ್ಲಾಘನಿಯವಾಗಿದೆ, ಪ್ರತಿಯೊಬ್ಬರು ಕ್ಷಯರೋಗದ ಬಗ್ಗೆ ಜಾಗೃತರಾಗಿ ಸತತವಾಗಿ ಕೆಮ್ಮು ಜ್ವರ ತೂಕ ಕಡಿಮೆ ಮತ್ತು ಹಸಿವಾಗದೆ ಇರುವುದು ಇದು ಕ್ಷಯರೋಗದ ಲಕ್ಷಣವಾಗಿದ್ದು ಮತ್ತು ಸಕ್ಕರೆ ಕಾಯಿಲೆಗೆ ಔಧಿಯನ್ನು ಸೇವಸುವಂತವರು ದೂಮಪಾನ ಮಾಡುವವರು ಯವುದೇ ಭಯಪಡದೆ ಆರೋಗ್ಯ ತಪಾಸಣೆಗೆ ಸ್ವಯಂ ಪ್ರೇರಣೆಯಿಂದು ಪರೀಕ್ಷಿಸಿಕೊಂಡು ಅಡವಿಸೋಮಾಪೂರ ಗ್ರಾಮವನ್ನು ಮತ್ತು ಭಾತರವನ್ನು ಕ್ಷಯರೋಗ ಮುಕ್ತಕ್ಕೆ ಕೈಜೊಡಿಸಬೇಕೆಂದು ಹೇಳಿದರು
ಕ್ಷಯರೋಗ ನಿಯಂತನ ಘಟಕದ ವೇಲ್ವಿಚಾರಕರಾದ ಗಣೇಶ ಬಗಾಡೆ ರವರು ಮಾತನಾಡಿ ಕ್ಷಯರೋಗ ನಿಯಂತ್ರಣಕ್ಕೆ ಗದಗ ಜಿಲ್ಲೆಯ ಪ್ರತಿಯೊಂದು ಖಾಸಗಿ ಆಸ್ಪತೆಯ ವೈದ್ಯರುಗಳು ಕ್ಷಯಮುಕ್ತಕ್ಕೆ ಪ್ರೋತ್ಸಾಯಿಸಿ ಆರೋಗ್ಯ ಇಲಾಖೆ ಕ್ಷಯರೋಗಿಗಳ ಮಾಹಿಯನ್ನು ನೀಡುತ್ತಿದ್ದು ಟಿಬಿ ವಿಭಾಗದಿಂದ ಉಚಿತವಾಗಿ ಔಷದೀಯನ್ನು ನೀಡುತ್ತಿದ್ದೇವೆ, 2030ಕ್ಕೆ ಟಿಬಿ ನಿರ್ಮೂಲನೆ ಮಾಡುವ ಉದ್ದೆಶದಿಂದ ಇಂದು ಪ್ರತಿಯೊಂದು ಉಪಕೇಂದ್ರಗಳಲ್ಲಿ ಕಫ ಪರೀಕ್ಷೆ ಮತ್ತು ಎಕ್ಷರೆ ಮಾಡಿ ತ್ವರಿತವಾಗಿ ರೋಗವನ್ನು ಕಂಡು ಹಿಡಿಯುವ ಮತ್ತು ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದೇವೆ ಆದ್ದರಿಂದ ಕ್ಷಯ ರೋಗಿಯು ಕೆಮ್ಮಿದಾಗ ಅಥವಾ ಸೀನುವಾಗ ಹೊರಬರುವ ತುಂತುರಗಳಿಂದ ಈ ರೋಗಾಣು ಗಾಳಿ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಅವನಿಗೆ ಸೋಂಕು ಉಂಟಾಗುತ್ತದೆ ಕ್ಷಯ ರೋಗದ ಲಕ್ಷಣಗಳು ಎರಡು ವಾರು ಅಥವಾ ಅದಕ್ಕಿಂತ ಮೇಲ್ಪಟ್ಟು ಸತತವಾದ ಕೆಮ್ಮ ಅದು ಕ್ಷಯವಾಗಿರಬಹುದು
ಜ್ವರ ಅದರಲ್ಲೂ ಸಂಜೆ ವೇಳೆ ಜ್ವರ ಬರುವುದು ಎದೆಯಲ್ಲಿ ನೋವು ಉಂಟಾಗುವುದು ತೂಕ ಕಡಿಮೆಯಗುವುದು ಹಸಿವಾಗದಿರುವುದ ಕಷದಲ್ಲಿ ರಕ್ತ ಬಿಳುವುದು ಇಂತಹ ಲಕ್ಷಣಗಳು ಯಾರಿಗಾದರು ಇಂದ್ದರೆ ಕಫ ಪರೀಕ್ಷೆ ಮಾಡಿಸಿಕೊಳ್ಳಿರಿ ಕ್ಷಯರೋಗಕ್ಕೆ ಚಿಕಿತ್ಸೆ 6ರಿಂದ 9 ತಿಂಗಳು ಇರುತ್ತದೆ.ಎಂದು ಹೇಳಿದರು
ಪ್ರಾಸ್ತಾವಿಕವಾಗಿ ಸಿದ್ದಪ್ಪ ಎನ್ ಲಿಂಗದಾಳ ಮಾತನಾಡಿದರು. ವೇದಿಕೆಯ ಮೇಲೆ ಡಾ.ದಿವಾಕರ ಪಾಟೀಲ ಡಾ.ಆದರ್ಶ ರೆಡ್ಡಿ. ಕ್ಷ ಕಿರಣ ತಜ್ಞ ಅಧಿಕಾರಿಗಳದ ಡಾನಿಲ್ ಕರಡಿಗುಡ್ಡ ಎನ್.ಟಿ.ಇಪಿಯ ಎಫ್.ಪಿ.ಮೋದಿನವರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಾಯ್ ಎನ್ ಕಡೇಮನಿ ಎಸ್.ಬಿ.ಗಡಾದ ಮುತ್ತಪ್ಪ ಹಟ್ಟಿಮನಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಸವಿತಾ ಪವಾರ ಜಯಶ್ರೀ ಡಬಾಲಿ. ಸಿಎಸ್.ಐ ಆಸ್ಪತ್ರೆಯ ಸಂದೀಪ್ ಮುಂತಾದವರು ಉಪಸ್ಥಿರಿದ್ದರು
ಕಾರ್ಯಕ್ರಮವನ್ನು ಎಸ್..ಎನ್ ಲಿಂಗದಾಳ ನಿರೂಪಿಸಿದರು ಎಸ್.ಬಿ.ಗಡಾದ ಸ್ವಾಗತಿಸಿದರು ಆಶಾ ಕಾರ್ಯಕರ್ತೆಯರಾದ ಮಾಲಾ ಮೇವುಂಡಿ ವಂದಿಸಿದರು
ಉಮಾ ಖಾನಾಪೂರ ರೇಣುಕಾ ಪುರದ ಮೀನಾಕ್ಷಿ ವಡ್ಡರ ಮಂಜುಳಾ ಆರಿ. ಲಲಿತಾ ಅಂಗಡಿ ಲಕ್ಷ್ಮೀ ಪೂಜಾರ. ಸಮೀಕ್ಷಾ ಕಾರ್ಯ ನಿರ್ವಹಿಸಿದರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP