ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ ಕಾಂಗ್ರೆಸ್ : ಸುರೇಶ್
ಗದಗ, 11 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಿಜೆಪಿ ಪಕ್ಷದ ಗದಗ ನಗರ ಮಂಡಲ ಅಧ್ಯಕ್ಷರಾದ ಸುರೇಶ ಮರಳಪ್ಪನವರ ಪತ್ರಿಕೆ ಹೇಳಿಕೆಯನ್ನು ಬಿಡುಗಡೆ ಮಾಡಿ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ನೀಡುವ ಬರದಲ್ಲಿ ರಾಜ್ಯದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಚ
ಫೋಟೋ


ಗದಗ, 11 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಿಜೆಪಿ ಪಕ್ಷದ ಗದಗ ನಗರ ಮಂಡಲ ಅಧ್ಯಕ್ಷರಾದ ಸುರೇಶ ಮರಳಪ್ಪನವರ ಪತ್ರಿಕೆ ಹೇಳಿಕೆಯನ್ನು ಬಿಡುಗಡೆ ಮಾಡಿ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ನೀಡುವ ಬರದಲ್ಲಿ ರಾಜ್ಯದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ.

ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿಗಳನ್ನು ಕೋಡುತ್ತೇನೆ ಎಂದು ಹೇಳಿ ಈ ಗ್ಯಾರಂಟಿಗಳಿಂದ ರಾಜ್ಯದ ಬಜೆಟ್ನಲ್ಲಿ ಎಷ್ಟು ಹಣ ಖರ್ಚು ಬರುತ್ತದೆ ಎಂದು ತಿಳಿಯದೆ ಕೇವಲ ಅಧಿಕಾರವನ್ನು ಹಿಡಿಯಬೇಕು ರಾಜ್ಯ ಸರ್ಕಾರಕ್ಕೆ ಇದರಿಂದ ಎಷ್ಟು ಹೊಡೆತ ಬಿಳುತ್ತದೆ ಎನ್ನುವ ಮುಂದಾಲೋಚನೆಯನ್ನು ಮಾಡದೆ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದರಿಂದ ಪ್ರತಿ ವರ್ಷ ಸುಮಾರು 55 ಸಾವಿರ ಕೋಟಿ ರೂ ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುವುದರಿಂದ ರಾಜ್ಯದ ಅಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗಿದ್ದು ಯಾವುದೇ ಹೊಸ ಕಾಮಗಾರಿ ಮಾಡಲು ದುಡ್ಡಿಲ್ಲದೆ ಅಭಿವೃದ್ಧಿ ಕಾಮಗಾರಿಗಳು ನಿಂತಿರುವವು.

ಶಕ್ತಿಯೋಜನೆಯ ಅಡಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಮಹಿಳೆಯರಿಗೂ ಹಾಗು ಸಾವಿರಾರು ರೂಪಾಯಿ ಸಂಬಳ ಪಡೆಯುವ ಮಹಿಳೆಯರಿಗೆ ಆದಾಯ ತೆರಿಗೆ ಪಾವತಿಸುವ ಮಹಿಳೆಯರಿಗೂ ಕೂಡಾ ಉಚಿತವಾಗಿ ಬಸ್ನಲ್ಲಿ ಅಡ್ಡಾಡಲು ಅನುಮತಿ ನೀಡಿದ್ದರಿಂದ ಇವತ್ತು ಸಾರಿಗೆ ಸಂಸ್ಥೆ ದೀವಾಳಿಯಾಗಿದೆ. ಸಾರಿಗೆ ನೌಕರರ ಸರಿಯಾದ ಸಮಯಕ್ಕೆ ಸಂಬಳ ಕೊಡಲು ಕೂಡ ತೀವ್ರವಾದ ತೊಂದರೆಯಲ್ಲಿ ಸಾರಿಗೆ ಇಲಾಖೆ ತೊಳಲಾಡುತ್ತಿದೆ. ಹೊಸ ಬಸ್ ಖರೀದಿ ಮಾಡಲು ಇದ್ದ ಬಸ್ಗಳ ಬಿಡಿ ಭಾಗ ಖರೀದಿಸಲು, ಡಿಸೈಲ್ ಕೊಳ್ಳಲು, ಸಾರಿಗೆ ನಿಗಮಕ್ಕೆ ತೀವ್ರವಾದ ತೊಂದರೆಯಾಗಿದೆ.

ಪಂಚ ಗ್ಯಾರಂಟಿಗಳಿಗಾಗಿ ಮುಖ್ಯಮಂತ್ರಿಗಳು ಹೆಚ್ಚಿನ ಸಾಲವನ್ನು ಮಾಡಿ ರಾಜ್ಯವನ್ನು ಬಿಕಾರಿ ರಾಜ್ಯವನ್ನಾಗಿ ಮಾಡಲು ಹೊರಟಿರುವರು. ಹಿಂದಿನ ಯಾವ ಮುಖ್ಯಮಂತ್ರಿಗಳು ಇಷ್ಟೊಂದು ಸಾಲವನ್ನು ಮಾಡಿದ್ದಿಲ್ಲಾ. ಆದರೆ ಸಿದ್ಧರಾಮಯ್ಯನವರ ಹಳಿ ತಪ್ಪಿದ ಆಡಳಿತದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಆರ್ಥಿಕವಾಗಿ, ದುರ್ಭಲ ವರ್ಗದವರಿಗೆ, ಬಡವರಿಗೆ ಭಾಗ್ಯಗಳನ್ನು ನೀಡಲಿ ಆದರೆ ಅಧಿಕಾರದ ಆಸೆಗಾಗಿ ತಮ್ಮ ಖರ್ಚಿಯನ್ನು ಭದ್ರಪಡಿಸಿಕೊಳ್ಳಲು ರಾಜ್ಯ ಖಜಾನೆಯನ್ನು ಖಾಲಿ ಮಾಡಿ ಸಾಲದ ರೂಪದಿಂದ ಹಣವನ್ನು ತಂದು ರಾಜ್ಯವನ್ನು ನಡೆಸುತ್ತಿದ್ದಾರೆ.

ಶಿಕ್ಷಣ ರಂಗದಲ್ಲಿ ಬಡ ವಿದ್ಯಾರ್ಥಿಗಳ ಶುಲ್ಕವನ್ನು ಧರ ಹೆಚ್ಚಳ, ವಿದ್ಯುತ್ ಧರ, ಹಾಲಿನ ಧರ, ಬಸ್ ಧರ, ಸ್ಟ್ಯಾಂಪ್ ಡ್ಯೂಟಿ, ಮಧ್ಯಪಾನದ ಧರ ಹೆಚ್ಚಳ, ಜನನ-ಮರಣ ಪ್ರಮಾಣ ಪತ್ರಕ್ಕು ಹಾಗು ಇನ್ನೂ ಹಲವಾರು ವಸ್ತುಗಳ ಧರ ಹೆಚ್ಚಳ ಹಾಗು ಕೇಂದ್ರ ಸರ್ಕಾರ ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಬಡಿವರಿಗೆ ಕಡಿಮೆ ಧರದಲ್ಲಿ ಔಷಧಿ ಸಿಗಲೆಂದು ಪ್ರಧಾನ ಮಂತ್ರಿ ಜನಔಷಧಿ ಕೇಂದ್ರವನ್ನು ಪ್ರಾರಂಭಿಸಿದರೆ ಈ ಕಾಂಗ್ರೆಸ್ ಸರ್ಕಾರ ಆ ಜನಔಷಧಿಗಳು ಬಂದ್ ಮಾಡಿದೆ, ಬೆಳಿಗ್ಗೆ ಎದಾಗಿನಿಂದ ಹಿಡಿದು ರಾತ್ರಿ ಮಲಗುವ ತನಕವೂ ದೈನಂದಿನ ಉಪಯೋಗಿಸುವ ಪ್ರತಿಯೊಂದು ಬೆಲೆಗಳನ್ನು ಹೆಚ್ಚು ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ ಕಾಂಗ್ರೇಸ್ ಸರ್ಕಾರ ಎಂದು ಸುರೇಶ ಮರಳಪ್ಪನವರ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande