ಮಲ್ಲಿಕಾರ್ಜುನ ಖರ್ಗೆ ವಿರುದ್ದ ಬಿಜೆಪಿ ಯುವ ಮೋರ್ಚಾ ದೂರು
ಗದಗ, 11 ಏಪ್ರಿಲ್ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ, ಗದಗ ನಗರ ಮಂಡಲ ಯುವ ಮೋರ್ಚಾ ವತಿಯಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡುವಾಗ ಕುರಾನ್ ಓದುತ್ತಿರುವಾಗ ಹಾಗು ನಮಾಜ್ ಮಾಡುತ್ತಿರುವಾಗ ವಿಷ ಸರ್ಪ
ಫೋಟೋ


ಗದಗ, 11 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ, ಗದಗ ನಗರ ಮಂಡಲ ಯುವ ಮೋರ್ಚಾ ವತಿಯಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡುವಾಗ ಕುರಾನ್ ಓದುತ್ತಿರುವಾಗ ಹಾಗು ನಮಾಜ್ ಮಾಡುತ್ತಿರುವಾಗ ವಿಷ ಸರ್ಪ ಬಂದರೆ ನಮಾಜ್ ಮಾಡುವುದನ್ನು ಬಿಟ್ಟು ಅದನ್ನು ಕೊಲ್ಲಬೇಕು ಎಂದು ಕುರಾನ್ದಲ್ಲಿ ಉಲ್ಲೇಖಿಸಲಾಗಿದೆ.

ಅದರಂತೆ ಈಗ ನೀವು ನಮಾಜ್ ಮಾಡುವಾಗ ಬಿಜೆಪಿ ಹಾಗು ಆರ್ಎಸ್ಎಸ್ ಕಾರ್ಯಕರ್ತರು ವಿಷ ಸರ್ಪಗಳಿದ್ದಂತೆ ಅವರನ್ನು ಕೊಲ್ಲದಿದ್ದರೆ ನೀವು ಬದುಕುವದಿಲ್ಲಾ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಹಿರಂಗ ಸಭೆಯಲ್ಲಿ ಮಾತನಾಡಿದ್ದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಗದಗ ಶಹರ ಪೋಲಿಸ್ ಠಾಣೆಗೆ ಇಂದು ದೂರು ನೀಡಿದೆ.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾಧ್ಯಕ್ಷರಾದ ಸಂತೋಷ ಅಕ್ಕಿ, ಗದಗ ನಗರ ಮಂಡಲ ಅಧ್ಯಕ್ಷರಾದ ನವೀನ ಕೊಟೆಕಲ್, ಹಿರಿಯರಾದ ಎಂ.ಎಂ.ಹಿರೇಮಠ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ನರೆಗಲ್, ವಿರೇಶಪ್ರಭು ಗದಗಿನ, ನಗರ ಮಂಡಲ ಅಧ್ಯಕ್ಷರಾದ ಸುರೇಶ ಮರಳಪ್ಪನವರ, ಪ್ರಧಾನ ಕಾರ್ಯದರ್ಶಿ ಸುರೇಶ ಚಿತ್ತರಗಿ, ಈರ್ಷಾದ ಮಾನ್ವಿ, ಶಶಿಧರ ದಿಂಡೂರ, ಶಿವರಾಜಗೌಡ ಹಿರೇಮನಿಪಾಟೀಲ, ಅರವಿಂದ ಅಣ್ಣಿಗೇರಿ, ಮಂಜುನಾಥ ಹಳ್ಳೂರಮಠ, ಪ್ರವೀಣ ಹಡಪದ, ವಿನಾಯಕ ಕಾಟ್ವಾ, ಶಂಕರ ಕಾಕಿ ಹಾಗು ಇನ್ನೂ ಹಲವಾರು ಪ್ರಮುಖರುಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande