ಕಲಬುರಗಿ ಮಹಾನಗರ ಪಾಲಿಕೆಯಿಂದ ಸ್ವಚ್ಛತೆಗೆ ವಾಹನಗಳ ಲೋಕಾರ್ಪಣೆ
ಕಲಬುರಗಿ, 10 ಏಪ್ರಿಲ್ (ಹಿ.ಸ.) : ಆ್ಯಂಕರ್ : ನಗರದ ಸ್ವಚ್ಛತೆ ಹಾಗೂ ಆಡಳಿತದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಹಿತದೃಷ್ಟಿಯಿಂದ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ವಿವಿಧ ಅನುದಾನಗಳಡಿ ಖರೀದಿಸಲಾದ ವಾಹನಗಳು ಹಾಗೂ ಯಂತ್ರೋಪಕರಣಗಳನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮು
vehicles


ಕಲಬುರಗಿ, 10 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನಗರದ ಸ್ವಚ್ಛತೆ ಹಾಗೂ ಆಡಳಿತದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಹಿತದೃಷ್ಟಿಯಿಂದ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ವಿವಿಧ ಅನುದಾನಗಳಡಿ ಖರೀದಿಸಲಾದ ವಾಹನಗಳು ಹಾಗೂ ಯಂತ್ರೋಪಕರಣಗಳನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಾಹನಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.

ಈ ಯೋಜನೆಯಡಿ ಖರೀದಿಸಲಾದ ವಾಹನಗಳು ಮತ್ತು ವೆಚ್ಚ ವಿವರಗಳು ಹೀಗಿವೆ:

32 ಆಟೋ ಟಿಪ್ಪರ್ಗಳಿಗೆ ₹3.63 ಕೋಟಿ

3 ಫ್ರಂಟ್ ಎಂಡ್ ಬ್ಯಾಕ್ ಹೋ ಲೋಡರ್ಗಳಿಗೆ ₹1.20 ಕೋಟಿ

7 ಟ್ರಾಕ್ಟರ್ಗಳು ಹಾಗೂ 6 ಟ್ರೈಲರ್ಗಳಿಗೆ ₹74.03 ಲಕ್ಷ

2 ಗಾರ್ಬೇಜ್ ಗ್ರ್ಯಾಬರ್ಗಳಿಗೆ ₹49.99 ಲಕ್ಷ, ಒಟ್ಟು ₹6.07 ಕೋಟಿ ಅನುದಾನದಲ್ಲಿ ಈ ವಾಹನಗಳನ್ನು ಖರೀದಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿ ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ರೂಪಿಸಲು ಮಹಾನಗರ ಪಾಲಿಕೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು. ಸಾರ್ವಜನಿಕರೂ ಸಹ ಸ್ವಚ್ಛತಾ ಕಾರ್ಯಗಳಲ್ಲಿ ಸಹಕರಿಸಿ ನಗರಾಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande