
ಹುಬ್ಬಳ್ಳಿ, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ :
ಮೇಷ ರಾಶಿ
ಬಂಧು-ಮಿತ್ರರೊಂದಿಗೆ ಅನಿರೀಕ್ಷಿತ ಕಲಹಗಳು ಉಂಟಾಗುತ್ತದೆ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಸ್ವಂತ ನಿರ್ಧಾರಗಳು ಅನುಕೂಲಕರವಾಗಿರುವುದಿಲ್ಲ. ಕೈಗೊಂಡ ಕೆಲಸಗಳು ಮುಂದೂಡಲ್ಪಡುತ್ತವೆ. ಸ್ನೇಹಿತರೊಂದಿಗೆ ದೇವಾಲಯ ಭೇಟಿ ಮಾಡುತ್ತೀರಿ. ಉದ್ಯೋಗದಲ್ಲಿ ಏರುಪೇರುಗಳು ಹೆಚ್ಚಾಗುತ್ತವೆ. ಪ್ರಯಾಣಗಳಲ್ಲಿ ವಾಹನ ಅಪಘಾತದ ಸೂಚನೆಗಳಿವೆ. ಆರ್ಥಿಕ ಪರಿಸ್ಥಿತಿ ನಿರಾಶೆ ಉಂಟಾಗುತ್ತದೆ.
ವೃಷಭ ರಾಶಿ
ಭೂ ಸಂಬಂಧಿತ ಖರೀದಿ-ಮಾರಾಟಗಳು ಲಾಭದಾಯಕವಾಗಿರುತ್ತವೆ. ಆರ್ಥಿಕ ಸ್ಥಿತಿ ಆಶಾಜನಕವಾಗಿರುತ್ತದೆ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ. ರಾಜಕೀಯ ವಲಯದಿಂದ ವಿಶೇಷ ಆಹ್ವಾನಗಳು ದೊರೆಯುತ್ತವೆ. ವ್ಯವಹಾರ ವಿಸ್ತರಣೆ ಪ್ರಯತ್ನಗಳು ವೇಗ ಪಡೆಯುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.
ಮಿಥುನ ರಾಶಿ
ಹೊಸ ವ್ಯವಹಾರ ಆರಂಭಕ್ಕೆ ಹೂಡಿಕೆ ದೊರೆಯುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯದಿಂದ ಸಮಸ್ಯೆಗಳನ್ನು ಪರಿಹರಿಸುತ್ತೀರಿ. ಮನೆಗೆ ಬಂಧು-ಮಿತ್ರರ ಆಗಮನ ಸಂತೋಷ ತರುತ್ತದೆ. ಸಮಾಜದಲ್ಲಿ ಕೀರ್ತಿ ಮತ್ತು ಗೌರವ ಹೆಚ್ಚಾಗುತ್ತದೆ. ಹೊಸ ವಸ್ತ್ರ ಮತ್ತು ಆಭರಣಗಳನ್ನು ಖರೀದಿಸುತ್ತೀರಿ.
ಕಟಕ ರಾಶಿ
ಬಂಧು-ಮಿತ್ರರೊಂದಿಗೆ ಮಾತಿನ ವಿವಾದಗಳು ಉಂಟಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ವೈದ್ಯಕೀಯ ಸಲಹೆ ಪಡೆಯಬೇಕಾಗುತ್ತದೆ. ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಉದ್ಯೋಗದಲ್ಲಿ ಹೆಚ್ಚು ಸಹನೆಯೊಂದಿಗೆ ನಡೆದುಕೊಳ್ಳಬೇಕು. ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುತ್ತೀರಿ. ಹೊಸ ಸಾಲ ಪ್ರಯತ್ನಗಳು ಹೆಚ್ಚು ಅನುಕೂಲಕರವಾಗಿರುವುದಿಲ್ಲ.
ಸಿಂಹ ರಾಶಿ
ಆರ್ಥಿಕ ವಿಷಯಗಳಲ್ಲಿ ಜಾಗ್ರತೆ ಅಗತ್ಯ. ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಸಹೋದರರೊಂದಿಗೆ ಮಾತಿನ ವಿವಾದಗಳು ಉಂಟಾಗುತ್ತವೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೃತ್ತಿ ಮತ್ತು ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ನಿಧಾನಗತಿಯಲ್ಲಿ ಮುಂದುವರೆಯುತ್ತವೆ.
ಕನ್ಯಾ ರಾಶಿ
ಹೊಸ ವಿಷಯಗಳತ್ತ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳ ಶಿಕ್ಷಣದಲ್ಲಿ ಶುಭವಾರ್ತೆಗಳು ದೊರೆಯುತ್ತವೆ. ಸಾಲ ಪಡೆದವರಿಂದ ಹಣ ವಾಪಸು ದೊರೆಯುತ್ತದೆ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತೀರಿ. ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯದಿಂದ ಕೆಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.
ತುಲಾ ರಾಶಿ
ಹೊಸ ಸಾಲ ಪ್ರಯತ್ನಗಳು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ದೂರ ಪ್ರಯಾಣದ ಸೂಚನೆಗಳಿವೆ. ಕುಟುಂಬ ವಾತಾವರಣ ಗೊಂದಲಕಾರಿ ಆಗಿರುತ್ತದೆ. ಬಂಧು-ಮಿತ್ರರೊಂದಿಗೆ ಅನಿರೀಕ್ಷಿತ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ವೃತ್ತಿ ಮತ್ತು ವ್ಯವಹಾರಗಳು ಲಾಭದಾಯಕವಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ನಿಧಾನಗತಿಯಲ್ಲಿ ಸಾಗುತ್ತವೆ.
ವೃಶ್ಚಿಕ ರಾಶಿ
ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ಹೆಚ್ಚಾಗುತ್ತವೆ. ಆತ್ಮೀಯರಿಂದ ಶುಭಕಾರ್ಯ ಆಹ್ವಾನಗಳು ದೊರೆಯುತ್ತವೆ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಬಂಧುಗಳಿಂದ ಗೃಹೋಪಕರಣಗಳನ್ನು ಉಡುಗೊರೆಯಾಗಿ ಪಡೆಯುತ್ತೀರಿ. ಆರ್ಥಿಕವಾಗಿ ಅನುಕೂಲಕರ ಪರಿಸ್ಥಿತಿ ಇರುತ್ತದೆ.
ಧನುಸ್ಸು ರಾಶಿ
ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಕೈಗೊಂಡ ಕೆಲಸಗಳಲ್ಲಿ ಅಡಚಣೆಗಳು ಎದುರಾಗುತ್ತವೆ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ವೃತ್ತಿ ಮತ್ತು ವ್ಯವಹಾರಗಳಲ್ಲಿ ಸಮಸ್ಯೆಗಳು ಮಾನಸಿಕ ಒತ್ತಡ ಉಂಟಾಗುತ್ತದೆ. ಉದ್ಯೋಗದಲ್ಲಿ ಅಚಾನಕ್ ಸ್ಥಳಾಂತರದ ಸೂಚನೆಗಳಿವೆ.
ಮಕರ ರಾಶಿ
ಮನೆಗೆ ಬಾಲ್ಯದ ಸ್ನೇಹಿತರ ಆಗಮನ ಸಂತೋಷ ತರುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿ ಪ್ರಶಂಸೆ ಪಡೆಯುತ್ತೀರಿ. ನಿರೀಕ್ಷಿತ ಸಮಯಕ್ಕೆ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ವೃತ್ತಿ ಮತ್ತು ವ್ಯವಹಾರಗಳು ಉತ್ಸಾಹದಿಂದ ಸಾಗುತ್ತವೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ.
ಕುಂಭ ರಾಶಿ
ವೃತ್ತಿ ಮತ್ತು ವ್ಯವಹಾರಗಳಲ್ಲಿ ಅನುಕೂಲತೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಇರುವ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮನೆ ಮತ್ತು ಹೊರಗಡೆ ಅನುಕೂಲಕರ ವಾತಾವರಣ ಇರುತ್ತದೆ. ಆತ್ಮೀಯರೊಂದಿಗೆ ಶುಭಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಪ್ರಯಾಣಗಳಲ್ಲಿ ಅಚಾನಕ್ ಹಣ ಲಾಭವಾಗುತ್ತದೆ.
ಮೀನ ರಾಶಿ
ಸ್ನೇಹಿತರೊಂದಿಗೆ ಸ್ವಲ್ಪ ವಿವಾದಗಳು ಉಂಟಾಗತ್ತದೆ. ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಮನೆ ಮತ್ತು ಹೊರಗಡೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ದೂರ ಪ್ರಯಾಣದ ಸೂಚನೆಗಳಿವೆ. ಕೈಗೊಂಡ ಕೆಲಸಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ವೃತ್ತಿ ಮತ್ತು ಉದ್ಯೋಗ ನಿರಾಶೆ ಉಂಟಾಗುತ್ತದೆ. ಕೆಲವು ವಿಷಯಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa