ಮೈಸೂರು–ಜಲ್ಪೈಗುಡಿ ನಡುವೆ ವಿಶೇಷ ರೈಲುಗಳ ಸಂಚಾರ
ಮೈಸೂರು, 10 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೇಸಿಗೆ ಕಾಲದಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ನೈರುತ್ಯ ರೈಲ್ವೆ ಮೈಸೂರು ಮತ್ತು ಜಲ್ಪೈಗುರಿ ಜಂಕ್ಷನ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಸಂಚರಿಸಲು ತೀರ್ಮಾನಿಸಿದೆ. ರೈಲು ಸಂಖ್ಯೆ 06251 ಮೈಸೂರು–ಜಲ್ಪೈಗು
ಮೈಸೂರು–ಜಲ್ಪೈಗುಡಿ ನಡುವೆ ವಿಶೇಷ ರೈಲುಗಳ ಸಂಚಾರ


ಮೈಸೂರು, 10 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೇಸಿಗೆ ಕಾಲದಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ನೈರುತ್ಯ ರೈಲ್ವೆ ಮೈಸೂರು ಮತ್ತು ಜಲ್ಪೈಗುರಿ ಜಂಕ್ಷನ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಸಂಚರಿಸಲು ತೀರ್ಮಾನಿಸಿದೆ.

ರೈಲು ಸಂಖ್ಯೆ 06251 ಮೈಸೂರು–ಜಲ್ಪೈಗುಡಿ ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ಏಪ್ರಿಲ್ 17 ಮತ್ತು 24 ರಂದು (ಶುಕ್ರವಾರಗಳು) ಮೈಸೂರಿನಿಂದ ಸಂಜೆ 4:40ಕ್ಕೆ ಹೊರಟು, ಭಾನುವಾರ ಸಂಜೆ 5:30ಕ್ಕೆ ಜಲ್ಪೈಗುಡಿ ಜಂಕ್ಷನ್ ತಲುಪಲಿದೆ.

ಇದೇ ವೇಳೆ, ರೈಲು ಸಂಖ್ಯೆ 06252 ಜಲ್ಪೈಗುಡಿ ಜಂಕ್ಷನ್–ಮೈಸೂರು ವಿಶೇಷ ಎಕ್ಸ್ಪ್ರೆಸ್ ಏಪ್ರಿಲ್ 20 ಮತ್ತು 27 ರಂದು (ಸೋಮವಾರಗಳು) ಜಲ್ಪೈಗುಡಿ ಜಂಕ್ಷನ್ನಿಂದ ಸಂಜೆ 4:45ಕ್ಕೆ ಹೊರಟು, ಬುಧವಾರ ಸಂಜೆ 4:00ಕ್ಕೆ ಮೈಸೂರು ತಲುಪಲಿದೆ.

ಈ ವಿಶೇಷ ರೈಲು ತನ್ನ ಮಾರ್ಗದಲ್ಲಿ ಮಂಡ್ಯ, ಮದ್ದೂರು, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಬಂಗಾರಪೇಟೆ, ಜೋಲಾರಪೇಟೆ, ಕಟ್ಪಾಡಿ, ರೇಣಿಗುಂಟಾ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ವಿಜಯನಗರಂ, ಶ್ರೀಕಾಕುಳಂ ರೋಡ್, ಭುವನೇಶ್ವರ, ಕಟಕ್, ಭದ್ರಕ್, ಖರಗ್ಪುರ್, ದಾಂಕುಣಿ, ಬರ್ಧಮಾನ, ರಾಮ್ಪುರ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಕಿಶನ್ಗಂಜ್ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.

ರೈಲು ಒಟ್ಟು 20 ಬೋಗಿಗಳನ್ನು ಹೊಂದಿದ್ದು, ಅವುಗಳಲ್ಲಿ 1 ಫಸ್ಟ್ ಎಸಿ (2 ಟಯರ್), 2 ಎಸಿ ತ್ರಿ-ಟಯರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಒಳಗೊಂಡಿರುತ್ತವೆ.

ಈ ವಿಶೇಷ ರೈಲುಗಳ ಸಂಚಾರದಿಂದ ದಕ್ಷಿಣ ಭಾರತದಿಂದ ಪೂರ್ವ ಭಾರತದತ್ತ ಪ್ರಯಾಣಿಸುವವರಿಗೆ ಹೆಚ್ಚಿನ ಸೌಲಭ್ಯ ದೊರೆಯಲಿದ್ದು, ಬೇಸಿಗೆ ಕಾಲದ ಪ್ರಯಾಣ ಒತ್ತಡ ಕಡಿಮೆಯಾಗಲಿದೆ ಎಂದು ಮೈಸೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಧರ್ಮರಾಜ ಕಲಗೊಂಡ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande