ಎಸ್ವಿ ನಾನಾವಟೆ ಕಾಲೇಜು : ವಿಜ್ಞಾನ ಶೇ.99, ವಾಣಿಜ್ಯ ಶೇ. 100 ರಷ್ಟು ಫಲಿತಾಂಶ
ಸಂಡೂರು, 10 ಏಪ್ರಿಲ್ (ಹಿ.ಸ.) : ಆ್ಯಂಕರ್ : ಸಂಡೂರು ಪಟ್ಟಣದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಎಸ್.ವಿ. ನಾನಾವಟೆ ಪದವಿಪೂರ್ವ ಕಾಲೇಜಿನ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಎನ್. ಸಂಜನಾ (596) ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 5 ನೇ ರ್ಯಾಂಕ್ ಪಡೆದು ಜಿಲ್ಲೆಗೆ ಮೊದಲ
ಎಸ್ವಿ ನಾನಾವಟೆ ಕಾಲೇಜು : ವಿಜ್ಞಾನ ಶೇ.99, ವಾಣಿಜ್ಯ ಶೇ. 100 ರಷ್ಟು ಫಲಿತಾಂಶ


ಎಸ್ವಿ ನಾನಾವಟೆ ಕಾಲೇಜು : ವಿಜ್ಞಾನ ಶೇ.99, ವಾಣಿಜ್ಯ ಶೇ. 100 ರಷ್ಟು ಫಲಿತಾಂಶ


ಸಂಡೂರು, 10 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸಂಡೂರು ಪಟ್ಟಣದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಎಸ್.ವಿ. ನಾನಾವಟೆ ಪದವಿಪೂರ್ವ ಕಾಲೇಜಿನ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಎನ್. ಸಂಜನಾ (596) ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 5 ನೇ ರ್ಯಾಂಕ್ ಪಡೆದು ಜಿಲ್ಲೆಗೆ ಮೊದಲ ಸ್ಥಾನ, ವಿಜ್ಞಾನ ವಿಭಾಗದ ಎಚ್. ಸುದೀಪ್ (593) ಅಂಕ ಪಡೆದು ರಾಜ್ಯಕ್ಕೆ 7 ನೇ ರ್ಯಾಂಕ್ ಹಾಗೂ ಜಿಲ್ಲೆಗೆ ಎರಡನೆಯ ಸ್ಥಾನ ಪಡೆದಿದ್ದಾರೆ.

ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕುಮಾರ ಎಸ್. ನಾನಾವಟೆ ಹಾಗೂ ಕಾರ್ಯದರ್ಶಿ ಚಿದಂಬರ ಎಸ್. ನಾನಾವಟೆ ಅವರು ಈ ಮಾಹಿತಿ ನೀಡಿದ್ದಾರೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿ ಡಿ.ಎಂ.ಶ್ರೇಯಾ (588), ಕೆ. ಅಲ್ಫಿಯಾ (582) ಪಡೆದಿದ್ದು, ಒಟ್ಟು 30 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 47 ವಿದ್ಯಾರ್ಥಿಗಳು ಮೊದಲದರ್ಜೆ, 8 ವಿದ್ಯಾರ್ಥಿಗಳು ಎರಡನೇದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಒಟ್ಟಾರೆ 87 ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು 85 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.98 ಫಲಿತಾಂಶ ದಾಖಲಾಗಿದೆ.

ವಿಜ್ಞಾನ ವಿಭಾಗದಲ್ಲಿ ಅಖಿಲ್ಕುಮಾರ್ (582), ಎಂ.ಕಿರಣ್ (578) ಅಂಕಗಳನ್ನು ಪಡೆದಿದ್ದಾರೆ. 83 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 85 ವಿದ್ಯಾರ್ಥಿಗಳು ಮೊದಲದರ್ಜೆ, 7 ವಿದ್ಯಾರ್ಥಿಗಳು ಎರಡನೇ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ವಿಜ್ಞಾನ ವಿಭಾಗದಲ್ಲಿ ಒಟ್ಟಾರೆ 177 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು 175 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.99 ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande